ಬೆಂಗಳೂರು:(ಜ02): ಸ್ಯಾಂಡಲ್‍ವುಡ್‍ನ ಸ್ವೀಟಿ ಎಂದೇ ಫೇಮಸ್ ಆದ ರಾಧಿಕಾ “ನೀಲ ಮೇಘಾ ಶಾಮ” ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟು, ಅದ್ಭುತ ನಟಿ ಎಂದೇ ಹೆಸರು ಮಾಡಿದ್ದಾರೆ.

ಈಗ ರಾಧಿಕಾ ಮನೆ ಬಿಟ್ಟು ಸ್ಮಶಾನ ಸೇರಿದ್ದಾರೆ. ಅಯ್ಯೂ ಯಾಕಪ್ಪ ಎಂದು ಆಶ್ಚರ್ಯವಾಗುವುದು ಸಹಜವೇ ಆದರೆ ನಟಿ ಎಂದ ಮೇಲೆ ಹೊಸ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿರ್ತಾರೆ. ಈಗ ರಾಧಿಕಾ “ಬೈರಾ ದೇವಿ” ಸಿನಿಮಾದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ.

ಬೆಂಗಳೂರಿನ ಸ್ಮಶಾನ ಒಂದರಲ್ಲಿ ಶೂಟಿಂಗ್ ನಡೆಯುತ್ತಿದ್ದು, ಈ ಸಿನಿಮಾ ಅಘೋರಿಗಳ ಸುತ್ತ ನಡೆಯುವ ಕಥೆಯಾಗಿದೆ. ಇಲ್ಲಿ ರಾಧಿಕಾ ಉಗ್ರ ರೂಪತಾಳಿದ್ದಾರಂತೆ.

ಒಟ್ಟಿನಲ್ಲಿ ಈ ಹಿಂದೆ ಸ್ಯಾಂಡ್‍ವುಡ್‍ನಲ್ಲಿ ಸ್ವೀಟಿಯ ಸಿನಿಮಾಗಳು ಸ್ವೀಟಾಗಿಯೇ ಮೂಡಿಬಂದಿದ್ದು, ಅಭಿಮಾನಿಗಳ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಈಗ ಈ ಹೊಸ ಸಿನಿಮಾದಲ್ಲಿ ರಾಧಿಕಾ ಅಭಿಮಾನಿಗಳ ಮೆಚ್ಚುಗೆ ಗಳಿಸ್ತಾರ ಎಂಬುದನ್ನು ಕಾದ್ ನೋಡ್ಬೇಕಾಗಿದೆ.