ಅಬುಧಾಬಿ(ಜ:೧೧):ಗುರುವಾರ ನಡೆದ ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಯುನೈಟೆಡ್ ಅರಬ್ ಎಮಿರೇಟ್ಸ್(UAE) ವಿರುದ್ಧ ನಡೆದ ಪಂದ್ಯದಲ್ಲಿ ೨-೦ ಗೋಲುಗಳಿಂದ ಸೋಲನ್ನನುಭವಿಸಿದೆ.

ಪಂದ್ಯದ ೪೧ನೆೇ ನಿಮಿಷದಲ್ಲಿ UAE ತಂಡದ ಆಟಗಾರ ಮುಬಾರಕ್,ಮೊದಲಾರ್ಧದ ಮುಕ್ತಾಯದ ವೇಳೆಗೆ ತಂಡಕ್ಕೆ ೧-೦ ಗೋಲಿನ ಮುನ್ನಡೆ ಒದಗಿಸಿದರು. ದ್ವಿತೀಯಾರ್ಧದಲ್ಲಿ ತಿರುಗೇಟು ನೀಡುವ ವಿಶ್ವಾಸದಲ್ಲೇ ಕಣಕ್ಕಿಳಿದ ಭಾರತ,UAE ಆಟಗಾರರ ವಿರುದ್ಧ ಗೋಲು ಗಳಿಸುವಲ್ಲಿ ವಿಫಲವಾಯಿತು. ೮೮ನೆೇ ನಿಮಿಷದಲ್ಲಿ UAE ತಂಡದ ಮತ್ತೊಬ್ಬ ಆಟಗಾರ ಅಲಿ ಮಬ್‌ಖೌತ್ ೨ನೆೇ ಗೋಲು ಬಾರಿಸಿ UAE ತಂಡವನ್ನು ಗೆಲ್ಲಿಸಿದರು.

ಈ ಸೋಲಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ೨ನೆೇ ಸ್ಥಾನಕ್ಕಿಳಿದಿದೆ,ಹೀಗಾಗಿ ನಾಕೌಟ್ ಹಂತಕ್ಕೇರಬೇಕಾದರೆ ಜ.೧೪ರಂದು ಬಹರೇನ್ ತಂಡದ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿ ಭಾರತಕ್ಕಿದೆ.