ನವದೆಹಲಿ(ಮಾ.14:) ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 19 ಮಂದಿ ಹಿರಿಯ ಸೇನಾ ಕಮಾಂಡರ್‍ಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಪರಮ ವಿಶಿಷ್ಟ ಪದಕಗಳನ್ನು ನೀಡಿದ್ದಾರೆ.

ತಮ್ಮ ಸೇವಾವಧಿಯಲ್ಲಿ ಶಾಂತಿ ಹಾಗೂ ಶೌರ್ಯವನ್ನು ಪ್ರದರ್ಶಿಸಿ ದೇಶದ ಹಿತವನ್ನು ಕಾಪಾಡಿದ್ದ 15 ಮಂದಿ ಲೆಫ್ಟಿನಂಟ್ ಜನರಲ್‍ಗಳು ಹಾಗೂ ಮೂವರು ಪ್ರಮುಖ ಜನರಲ್‍ಗಳಿಗೂ ರಮಾನಾಥ್ ಕೋವಿಂದ್ ಪದಕ ಪ್ರದಾನ ಮಾಡಿದರು.

2016ರಲ್ಲಿ ಸೇನೆಯ ಮುಖ್ಯಸ್ಥರಾಗಿ ನೇಮಕಗೊಂಡ ರಾವತ್ ಇದಕ್ಕೂ ಮುನ್ನ ತಮ್ಮ ಸೇವೆಗಾಗಿ ಉತ್ತಮ ಯೋಧ ಸೇವಾ ಪದಕ, ಅತಿ ವಿಶಿಷ್ಟ್ ಸೇವಾ ಪದಕ, ವಿಶಿಷ್ಟ್ ಸೇವಾ ಪದಕ, ಯೋಧ ಸೇವಾ ಪದಕ ಹಾಗೂ ಸೇನಾ ಪದಕಗಳಿಗೆ ಭಾಜನರಾಗಿದ್ದರು.

ಮೇಜರ್ ಅಮಿತ್ ಕುಮಾರ್ ಡಿಮ್ರಿ, ಅಭಯ್ ಶರ್ಮಾ, ಕ್ಯಾಪ್ಟನ್ ಅಭಿನವ್ ಕುಮಾರ್ ಚೌಧರಿ, ಲ್ಯಾನ್ಸ್ ನೈಕ್ ಅಯ್ಯುಬ್ ಅಲಿ, ಅಜಯ್ ಕುಮಾರ್, ಮಹೇಶ್ ಎಚ್.ಎನ್. ಸೇರಿದಂತೆ 12 ಮಂದಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.