ಬೆಂಗಳೂರು(ಅ.23) ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ SBI ಬ್ಯಾಂಕ್ ಈಗ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಎಟಿಎಂ ನಲ್ಲಿ 10ಸಾವಿರ ಹಣ ವಿತ್ ಡ್ರಾ ಮಾಡಬೇಕಾದರೆ ಒತ್ತಿಪಿ ಯನ್ನು ನೀಡಬೇಕಿದೆ. ಒಟಿಪಿಯನ್ನು ನೀಡದಿದ್ದರೆ ಹಣ ಪಡೆಯಲು ಸಾಧ್ಯವಿಲ್ಲ.

ಈ ನಿಯಮವನ್ನು SBI ಈಗಾಗಲೇ ಜಾರಿಗೆ ತಂದಿದೆ. ಸೆಪ್ಟೆಂಬರ್ 18 ರಿಂದಲೇ ಇದನ್ನು 24 ಗಂಟೆಗಳ ಕಾಲ ಜಾರಿಗೆ ತರಲಾಗಿದೆ. ಈ ಮೊದಲು, SBI ಅಕ್ಟೋಬರ್ 1 ರಿಂದ ವಿದೇಶಕ್ಕೆ ಹಣ ಕಳುಹಿಸುವ ನಿಯಮಗಳನ್ನು ಬದಲಾಯಿಸಿದೆ. ಈಗ ಗ್ರಾಹಕರು ವಿದೇಶದಲ್ಲಿ ನಡೆಯುವ ವ್ಯವಹಾರಗಳಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ, ಗ್ರಾಹಕರು ವಿದೇಶಕ್ಕೆ ಹಣವನ್ನು ಕಳುಹಿಸಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಎಟಿಎಂನಲ್ಲಿ ಹಣ ನಮೋದಿಸಿದ ನಂತರ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದ ನಂತರ ಹಣ ವಿತ್ ಡ್ರಾ ಮಾಡಬಹುದಾಗಿದೆ. ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಈಗ ಮೊಬೈಲ್ ಅನಿವಾರ್ಯವಾಗಿದೆ.