ನವದೆಹಲಿ(ನ.07): ಮುಂದಿನ ದೆಹಲಿ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗವು ಆ್ಯಪ್ ಜಾರಿಗೆ ತರುವ ಚಿಂತನೆ ನಡೆಸುತ್ತಿದೆ. ಈ ಆ್ಯಪ್ ಮೂಲಕ ವೃದ್ಧರು & ಅಂಗವಿಕಲ ಮತದಾರರು ಮನೆಯಲ್ಲಿಯೇ ಕುಳಿತು ಮತದಾನ ಮಾಡಬಹುದಾಗಿದ್ದು, ನೈಜ ಸಮಯದ ಬೂತ್ ಡೇಟಾ ಈ ಅಪ್ಲಿಕೇಶನ್ ಮೂಲಕ ಲಭ್ಯವಿದ್ದು, ಈ ಅಪ್ಲಿಕೇಶನ್ ಹೆಸರು ಬೂತ್ ಅಪ್ಲಿಕೇಶನ್.

80 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮತದಾನ ಮಾಡಲು ಬೂತ್‍ಗೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ. ಬದಲಾಗಿ ಅವರು ಅಂಚೆ ಮತಪತ್ರವನ್ನು ಬಳಸಿಕೊಂಡು ಮತ ಚಲಾಯಿಸಬಹುದು. ಮೊದಲು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಇದನ್ನು ಪ್ರಯೋಗಿಕವಾಗಿ ಜಾರಿಗೆ ತರಲಾಗುವುದು. ಅಮಚೆ ಪತ್ರದ ಮೂಲಕ ಮತಚಲಾಯಿಸಲು ಮತದಾರರು ಅಧಿಸೂಚನೆ ಹೊರಡಿಸಿದ ಐದು ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು.

ಈ ಆ್ಯಪ್ ಬಗ್ಗೆ ವಿವರವಾದ ಮಾಹಿತಿಗಳನ್ನು ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಸಭೆಯಲ್ಲಿ ಭಾರತದ ಚುನಾವಣಾ ಅಧಿಕಾರಿಗಳು ನೀಡಿರುತ್ತಾರೆ. ಈ ಆ್ಯಪ್ ಬಳಸಿ ಮತದಾರರು ಬೂತ್‍ನಲ್ಲಿ ಎಷ್ಟು ಸಮಯ ಇರುತ್ತಾರೆ ಎಂಬುದನ್ನು ತಿಳಿಯಬಹುದಾಗಿದೆ. ಎಷ್ಟು ಮತದಾರರು ಬೂತ್ ತಲುಪಿದ್ದಾರೆ ಎಂಬುದನ್ನು ಸಹ ತಿಳಿಯಬಹುದಾಗಿದೆ.