ಮುಂಬೈ(ಜ,18): ಬಾಲಿವುಡ್ ನಟ ರಣವೀರ್ ಸಿಂಗ್ ತನ್ನ ಮಾಜಿ ಪ್ರೇಯಸಿ ಅನುಷ್ಕಾ ಶರ್ಮಾರನ್ನು ನೆನಪಿಸಿಕೊಂಡಿದ್ದಾರೆ. ಅನುಷ್ಕಾ ನನ್ನ ಆರತಕ್ಷತೆಗೆ ಆಗಮಿಸಿದ್ದು ನನಗೆ ತುಂಬಾನೇ ಸ್ಪೆಷಲ್ ಎಂದು ಹೇಳಿಕೊಂಡಿದ್ದಾರೆ

ಫಿಲಂಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿರುವ ವೇಳೆ ಪತ್ರಕರ್ತರು ನಿಮ್ಮ ಆರತಕ್ಷತೆಗೆ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಎಲ್ಲರೂ ಆಗಮಿಸಿ ನಿಮಗೆ ಶುಭಾಶಯ ಕೋರಲು ಬಂದಿದ್ದರು. ಅವರು ನಿಮ್ಮ ಆರತಕ್ಷತೆಗೆ ಬಂದಿದ್ದು ನಿಮಗೆ ಹೇಗೆ ಅನಿಸಿತು ಎಂದು ಪ್ರಶ್ನಿಸಿದ್ದರು. ಆಗ ರಣವೀರ್ ಎಲ್ಲರು ಆಗಮಿಸಿದ್ದು ಖುಷಿ ಆಯಿತು. ಅದರಲ್ಲೂ ಅನುಷ್ಕಾ ಶರ್ಮಾ ನನ್ನ ಆರತಕ್ಷತೆಗೆ ಬಂದಿದ್ದು ನನಗೆ ತುಂಬಾನೇ ಸ್ಪೆಷಲ್ ಅನಿಸಿತ್ತು ಎಂದಿದ್ದಾರೆ.

ಬ್ಯಾಂಡ್ ಬಾಜಾ ಭಾರತ್ ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ಅನುಷ್ಕಾ ಶರ್ಮಾ ನಟಿಸಿದ್ದರು. ಈ ಚಿತ್ರದಿಂದ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು ಬಳಿಕ ಯಾವುದೋ ಕಾರಣದಿಂದ ಇಬ್ಬರ ನಡುವಿನ ಪ್ರೀತಿ ಬ್ರೇಕಪ್ ಆಗಿತ್ತು.

ನಂತರ ಅನುಷ್ಕಾ 2017ರಲ್ಲಿ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊದ ದ್ರಾಕ್ಷಿ ತೋಟದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ರಣವೀರ್ 2018ರಲ್ಲಿ ಇಟಲಿಯ ಲೇಕ್ ಕೋಮೋದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಕೈ ಹಿಡಿದಿದ್ದರು.