ನವದೆಹಲಿ(ಜ.16): 24 ವರ್ಷದ ಯುವತಿಯ ಮೇಲೆ ಆಕೆಯ ಸ್ನೇಹಿತ ಮತ್ತು ಆತನ ಇಬ್ಬರು ಸಹಚರರು ಸೇರಿ ಕಾರಿನೊಳಗೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಸೋಮವಾರ ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಆರೋಪಿಯನ್ನು ಅಮಿತ್(30) ಎಂದು ಗುರುತಿಸಲಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಆರೋಪಿಗಳು ಸಂತ್ರಸ್ತೆಗೆ ಮತ್ತು ಬರುವ ಔಷಧಿಯನ್ನು ಜ್ಯೂಸಿನಲ್ಲಿ ಮಿಕ್ಸ್ ಮಾಡಿ ಕುಡಿಸಿ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಸಂತ್ರಸ್ತೆಯು ದೆಹಲಿಯ ಸೀಲಾಂಪುರ್ ನಿವಾಸಿಯಾಗಿದ್ದು, ಹಣಕಾಸು ವ್ಯವಹಾರ ಮಾಡಲು ಆರೋಪಿ ಅಮಿತ್ ತನ್ನ ಜೊತೆ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದಾನೆ.ಅಲ್ಲಿಲ್ಲಿ ಸಂತ್ರಸ್ತೆ ಸೇರಿದಂತೆ ನಾಲ್ವರು ಸಾಲದ ಬಗ್ಗೆ ಮಾತನಾಡುತ್ತಿದ್ದು, ಜ್ಯೂಸಿನಲ್ಲಿ ಮತ್ತು ಬರುವ ಔಷಧಿಯನ್ನು ಮಿಕ್ಸ್ ಮಾಡಿ ಕೊಟ್ಟಿದ್ದಾರೆ. ನಂತರ ತಕ್ಷಣ ಮೂವರು ಆಕೆಯನ್ನು ಕಾರಿನೊಳಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿ ಸಂತ್ರಸ್ತೆಯನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಸಂತ್ರಸ್ತೆ ಮಾಲ್ ನ ಬಳಿ ಕಾರಿನಲ್ಲಿ ಕುಳಿತು ಅಳುತ್ತಿದ್ದನ್ನು ನೋಡಿದ ಅಪರಿಚಿತರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಈ ಕುರಿತು ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಮತ್ತಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ