ಶಿವಮೊಗ್ಗ(ಜ:31):ಶಿವಮೊಗ್ಗ ಮೊದಲಿಂದಲೂ ಪಾತಕ ಲೋಕಕ್ಕೆ ಹೆಸರುವಾಸಿ. ಇತ್ತೀಚೆಗೆ ಇದು ಪುನರಾವರ್ತನೆ ಆಗುತ್ತಿರುವುದು ಕಂಡುಬರುತ್ತಿದೆ. ಕೆಲವೇ ತಿಂಗಳುಗಳ ಹಿಂದೆ ಮಾರ್ಕೆಟ್ ಗಿರಿ ಯನ್ನ ಹತ್ಯೆ ಮಾಡಲಾಗಿತ್ತು ಅದಾದ ನಂತರ ಭದ್ರಾವತಿ ಸಮೀಪ ಮತ್ತೊಂದು ಕೊಲೆ ನಡೆದಿತ್ತು ನಿನ್ನೆಇನ್ನೊಂದು ಕೊಲೆ ಶಿವಮೊಗ್ಗದಲ್ಲಿ ನಡೆದಿದೆ.
ಮಾರ್ಕೆಟ್ ಗೋವಿಂದ ಹತ್ಯೆಯಾದ ವ್ಯಕ್ತಿ. ಈತ ಕೂಡ ರೌಡಿಶೀಟರ್ ಆಗಿದ್ದ. ಇತ್ತೀಚಿಗೆ ನಡೆದ ಮಾರ್ಕೆಟ್ ಗಿರಿ ಕೊಲೆ ಪ್ರಕರಣದಲ್ಲಿ ಈತನ ಸಹೋದರ ಮಾರ್ಕೆಟ್ ಲೋಕಿ ಭಾಗಿಯಾಗಿದ್ದ. ಗಿರಿ ಹತ್ಯೆಯ ನಂತರ ಗೋವಿಂದ ಕೂಡ ತಲೆಮರೆಸಿಕೊಂಡಿದ್ದ ಎನ್ನಲಾಗುತ್ತಿದೆ. ಇದೀಗ ಗೋವಿಂದ್ ಕೂಡ ಹತ್ಯೆಯಾಗಿದ್ದು ಪೊಲೀಸರು ಕೊಲೆಗಾರರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ಪಾತಕ ಲೋಕಕ್ಕೆ ಹೆಸರುವಾಸಿಯಾದ ಶಿವಮೊಗ್ಗ ಮತ್ತೆ ಮತ್ತೆ ಅದೇ ಲೋಕಕ್ಕೆ ಹಿಂತಿರುಗಿದ್ದು ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ.