ಬಿಜಿಂಗ್(ಜ.16): ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲುನ್ನು ಸಾಧಿಸುವ ಮೂಲಕ ಈಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಹೌದು, ಚೀನಾದ ಚ್ಯಾಂಗ್ ಇ-4 ಎಂಬ ನೌಕೆ ಚಂದ್ರನ ಮೇಲೆ ಗಿಡವೊಂದನ್ನು ಚಿಗುರಿಸುವಲ್ಲಿ ಯಶಸ್ವಿಯಾಗಿದ್ದು, ಭೂಮಿಯ ನೈಸರ್ಗಿಕ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆಯೊಡೆದಿರುವುದರ ಚಿತ್ರವನ್ನು ಚೀನಾದ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

2018 ರ ಜ.03 ರಂದು ಭೂಮಿಗೆ ಗೋಚರವಾಗದ ಚಂದ್ರನ ಮತ್ತೊಂದು ಭಾಗದ ಮೇಲೆ ಚೀನಾದ ಚ್ಯಾಂಗ್ ಇ-4 ಬಾಹ್ಯಾಕಾಶ ನೌಕೆ ಇಳಿದಿತ್ತು. ಚಂದ್ರನ ಮೇಲೆ ಇಳಿಯುತ್ತಲೇ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಹತ್ತಿ ಬೀಜವನ್ನು ಬಿತ್ತಿದ್ದರು ಈಗ ಅದು ಚಿಗುರೊಡೆದಿದೆ.

ಚಂದ್ರನ ಮೇಲ್ಮೈ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಚೀನಾದ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಆದರೆ ಈಗ ಗಿಡಗಳ ಬೆಳವಣಿಗೆಗೆ ಸಹಕಾರಿಯಾಗಿರುವ ಉಷ್ಣತೆಯನ್ನು ಕಾಪಾಡುವುದು ಸವಾಲಿನ ಸಂಗತಿಯಾಗಿದೆ.