ಚಿಕ್ಕಬಳ್ಳಾಪುರ(ಮೇ:29): ಸರ್ಕಾರ ಉಳಿಸಿಕೊಳ್ಳುವ ಚಿಂತೆ ಮಧ್ಯೆ ಮೈತ್ರಿ ನಾಯಕರಿಗೆ ಮತ್ತೊಂದು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಸುಬ್ಬಾರೆಡ್ಡಿ ಅವರಿಗೆ ರೇಷ್ಮೆ ನಿಗಮ ಮಂಡಳಿಯನ್ನು ನೀಡಲಾಗಿತ್ತು. ಆದರೆ ಸುಬ್ಬಾರೆಡ್ಡಿ ಅವರು ರೇಷ್ಮೆ ಮಂಡಳಿಗೆ ರಾಜೀನಾಮೆ ನೀಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ರಾಜೀನಾಮೆ ನೀಡಿದ್ದ ಸುಬ್ಬಾರೆಡ್ಡಿ ಅವರು ರೇಷ್ಮೆ ನಿಗಮ ಮಂಡಳಿ ಜೆಡಿಎಸ್ ಸಚಿವರ ಕೈ ಕೆಳಗೆ ಬರುತ್ತೆ ನನಗೆ ಈ ನಿಗಮ ಮಂಡಳಿ ಇಷ್ಟವಿಲ್ಲ ಬೇರೆ ಮಂಡಳಿ ಕೊಡೋದ್ರಿದ್ರೆ ಕೊಡಲಿ, ಇಲ್ಲಾಂದ್ರೆ ಬೇಡ ಎಂದು ಕಡ್ಡಿ ಮುರಿಯುವಂತೆ ತಮ್ಮ ನಿಲುವನ್ನು ತಿಳಿಸಿದ್ದಾರೆ.

ಸುಬ್ಬಾರೆಡ್ಡಿಯವರ ಈ ನಿಲುವು ಸಂಕಷ್ಟದಲ್ಲಿರುವ ಮೈತ್ರಿ ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟದ ವಾತಾವರಣವನ್ನು ತಂದೊಡ್ದಿದೆ.