ಮುಂಬೈ(ಏ,26); ಸಾಮಾಜಿಕ ಮಾಧ್ಯಮಗಳು ಇಂದಿನ ಪೀಳಿಗೆಗೆ ಅಣುಬಾಂಬ್ ಇದ್ದಂತೆ ಎಂದು ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ಹೇಳಿದ್ದಾರೆ.

ಟ್ವಿಟರ್ ನಲ್ಲಿ 36.9, ಇನ್ಸ್ಟಾಗ್ರಾಮ್ ನಲ್ಲಿ 12.6 ಮಿಲಿಯನ್ ಪಾಲವರ್ಸ್ ಹಾಗೂ ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಸುಮಾರು 30 ಮಿಲಿಯನ್ಸ್ ಲೈಕ್ಸ್ ಹೊಂದಿರುವ ಅಮಿತಾಭ್ ಗುರುವಾರ ಸಂಜೆ ಸಾಮಾಜಿಕ ಮಾಧ್ಯಮಗಳ ಕುರಿತು ತಮ್ಮ ಅಭಿಪ್ರಾಯವನ್ನು ಬ್ಲಾಗ್‍ನಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮವು ಆಧುನಿಕ ಪೀಳಿಗೆಗೆ ಪರಮಾಣು ಬಾಂಬ್ ಆಗಿದ್ದು, ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು ಹಾಗೂ ರಾಜಕೀಯ ಅಥಾವ ಇನ್ಯಾವುದೆ ವಿಚಾರಗಳಿಗೆ ಸಂಬಂಧ ಪಟ್ಟಂತೆ ತಮ್ಮ ದೃಷಿಕೋನವನ್ನು ನೀಡಬಹುದು. ತಮ್ಮ ಶತೃಗಳಿಗೆ ತಕ್ಷಣದ ಪ್ರತಿಕ್ರಿಯೇಗಳನ್ನು ನೀಡುವ ಸಾಮಥ್ರ್ಯವನ್ನು ಹೊಂದಿದೆ ದೆ ಎಂದು ಬರೆದುಕೊಂಡಿದ್ದಾರೆ.

ಅಮಿತಾಭ್ ನಿರ್ದೇಶಕ ಅಯ್ಯನ್ ಮುಖರ್ಜಿಯ ಬ್ರಹ್ಮಸ್ತ್ರ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದು, ಈ ಚಿತ್ರದಲ್ಲಿ ಬಿಟೌನ್ ಲವ್ ಕಪಲ್ಸ್ ಆದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ತೆರೆ ಹಂಚಿಕೊಳ್ಳಲಿದ್ದಾರೆ.