ನವದೆಹಲಿ(ಮಾ:15): ಶೀಲಾ ದೀಕ್ಷಿತ್ ಚಾನೆಲ್ ಒಂದರಲ್ಲಿ ಸಂದರ್ಶನ ನೀಡುವ ಸಂದರ್ಭದಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ನಂತರವೂ ಭಯೋತ್ಪಾದಕರ ವಿರುದ್ಧ ಹೋರಾಡುವ ಕೆಲಸಕ್ಕೆ ಆಗಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಮುಂದಾಗಲಿಲ್ಲ,ಭಯೋತ್ಪಾದನೆಯ ನಿಗ್ರಹದ ವಿಷಯದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡ ಮೋದಿಯವರಷ್ಟು ಧೈರ್ಯ ಮನಮೋಹನ್ ಸಿಂಗ್ ಅವರಿಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು ಎಂದಿದ್ದರು.

ಇದಕ್ಕೆ ತಮ್ಮ ಟ್ವಿಟ್ಟರ್ ಮೂಲಕ ಕೃತಜ್ಞತೆ ತಿಳಿಸಿದ ಅಮಿತ್ ಷಾ “ಇಡೀ ದೇಶಕ್ಕೇ ಗೊತ್ತಿರುವ ಸತ್ಯವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಒಪ್ಪಿಕೊಳ್ಳದಿದ್ದರೂ,ಅದನ್ನು ಪುನರುಚ್ಚರಿಸಿದ ಶೀಲಾ ದೀಕ್ಷಿತ್ ಅವರಿಗೆ ನನ್ನ ಧನ್ಯವಾದಗಳು” ಎಂದು ತಿಳಿಸಿದ್ದಾರೆ.