ವಾಷಿಂಗ್ಟನ್(ಮಾ:16): ನ್ಯೂಯೋರ್ಕ್ ನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯನ್ನು ಅಮೇರಿಕಾ ಇನ್ನೂ ಮರೆತಿಲ್ಲ,ಉಗ್ರಗಾಮಿಗಳಿಗೆ ಆಶ್ರಯ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಬೇಕೆಂದು ಅಮೇರಿಕಾದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಪಾಕಿಸ್ಥಾನಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತದಲ್ಲಿ ಏನಾಗಿದೆ ಎಂದು ನಮಗೆ ಗೊತ್ತಿದೆ,ಭಾರತದಲ್ಲಿ ನಡೆದ ದಾಳಿಗೆ ಪಾಕಿಸ್ತಾನ ಕಳುಹಿಸಿದ ಉಗ್ರರೇ ಕಾರಣ ಎಂದರು,ಪಾಕಿಸ್ತಾನದವರು ಉಗ್ರರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಿ,ಭಯೋತ್ಪಾದನೆಯನ್ನು ಮಟ್ಟಹಾಕುವತ್ತ ಹೆಜ್ಜೆ ಇಡಬೇಕು ಎಂದರು.