ಬೆಂಗಳೂರು(ಜು:11): ಸಮ್ಮಿಶ್ರ ಸರಕಾರವನ್ನು ಹೇಗಾದರೂ ಉಳಿಸಿಕೊಳ್ಳಲೇ ಬೇಕು ಎನ್ನುವ ಹಠ ಹಿಡಿದಿರುವ ಸಚಿವ ಡಿ ಕೆ ಶಿವಕುಮಾರ್, ಸಂಜೆಯೊಳಗೆ ಕಾದು ನೋಡಿ ಎಂದಿದ್ದಾರೆ.

ನ್ಯಾಯಾಲಯದ ಆದೇಶದಂತೆ, ಮುಂಬೈನಲ್ಲಿರುವ ಅತೃಪ್ತ ಶಾಸಕರು, ಬೆಂಗಳೂರಿಗೆ ಬಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಬೇಕಿದೆ, ನೋಡೋಣ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಅವರೆಲ್ಲರೂ ನಮ್ಮವರೇ, ಅವರು ಬೆಂಗಳೂರಿಗೆ ಬಂದಾಗ ಅವರ ಜೊತೆ ಮಾತನಾಡಿ, ಅವರ ಮನವೊಲಿಕೆಯ ಪ್ರಯತ್ನವನ್ನು ಮಾಡಲಾಗುವುದು ಎನ್ನುವ ಆಶಾಭಾವನೆಯನ್ನು ಡಿ ಕೆ ಶಿವಕುಮಾರ್ ಹೊರಹಾಕಿದ್ದಾರೆ.

ಸರ್ಕಾರಕ್ಕೆ ಏನೂ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಲೇ ಬರುತ್ತಿರುವ ಡಿ ಕೆ ಶಿವಕುಮಾರ್, ಅತೃಪ್ತರು ಬೆಂಗಳೂರಿಗೆ ಬಂದಾಗ ಯಾವ ರೀತಿ ಹೆಜ್ಜೆಯಿಡಲಿದ್ದಾರೆ ಎನ್ನುವುದು ಕಾದುನೋಡಬೇಕಿದೆ.