ಶಿವಮೊಗ್ಗ(ಆಗಸ್ಟ್.13) ಮಲೆನಾಡು ಪ್ರದೇಶದಲ್ಲಿ ಅತಿಹೆಚ್ಚು ಮಳೆ ಸಂಭವಿಸಿ ರಸ್ತೆಗಳೆಲ್ಲಾ ಕೊಚ್ಚಿಹೋಗಿವೆ.ತುಂಗಾನದಿಯಿಂದ ಪಟ್ಟಣದ ಕುಶಾವತಿ, ಇನ್ನಿತರ ಕಡೆಯೆಲ್ಲ ಮುಳುಗಿ ಹೋಗಿದೆ. ಈಗ ಮಳೆ ಕೆಲವೊಮ್ಮೆ ವಿಶ್ರಾಂತಿ ನೀಡಿದ್ದು ತಾಲೂಕಿನ ಕಡೆ ಬಹಳಷ್ಟು ಹಾನಿಗೀಡಾಗಿದೆ.

ಕುಡುಮಲ್ಲಿಗೆಯ ಸಮೀಪ ಕುಂಟೆಹೊಳೆಯಲ್ಲಿ ಚಂದ್ರಪ್ಪ ಎಂಬುವರು ಪ್ರವಾಹದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.ಆಲೂರು ಹೊಸಕೊಪ್ಪಕ್ಕೆ ಹೋಗುವ ಎಲ್ಲಕಡೆ ಸೇತುವೆಗಳು ಜರಿದು ಈ ಊರಿನ ಜನರು ಓಡಾಟಕ್ಕೆ ಪರದಾಡುವಂತಾಗಿದೆ.ಸ್ಥಳೀಯರು ಈ ರಸ್ತೆಗಳ ದುರಸ್ತಿಗೆ ಆಡಳಿತ ವ್ಯವಸ್ಥೆಗೆ ಮನವಿ ಮಾಡಿದ್ದಾರೆ. ಒಟ್ಟಾರೆ ಈ ಬಾರಿಯ ಮಳೆ ತೀರ್ಥಹಳ್ಳಿಯಲ್ಲಿ ಸಾಕಷ್ಟು ಹಾನಿಯನ್ನು ಉಂಟುಮಾಡಿದೆ.