ಕೇಪ್ ಟೌನ್(ಮಾ:16): ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ಜೆಪಿ ಡುಮಿನಿ ಅವರು ಅಂತಾರಾಷ್ಟ್ರೀಯ ಏಕದಿನದಿಂದ ದೂರ ಉಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಬಾರಿಯ ಏಕದಿನ ವಿಶ್ವಕಪ್ ಬಳಿಕ ಏಕದಿನದಿಂದ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದಾರೆ.

ನಿವೃತ್ತಿ ನಿರ್ಧಾರ ಪ್ರಕಟಿಸಿದ ಬಳಿಕ ಮಾತನಾಡಿದ ಡುಮಿನಿ ‘ಇಂಥ ನಿರ್ಧಾರಗಳನ್ನು ಪ್ರಕಟಿಸೋದು ಸುಲಭವಿಲ್ಲ. ಆದರೆ ನನಗೂ ಇದು ಮುನ್ನಡೆಯಲು ಸಕಾಲ ಅನ್ನಿಸುತ್ತಿದೆ. ಅಂತಾರಾಷ್ಟ್ರೀಯ ಮತ್ತು ದೇಸಿ ಟಿ20 ಕ್ರಿಕೆಟ್‌ಗೆ ನಾನು ಲಭ್ಯನಿದ್ದೇನೆ. ಇದರ ಜೊತೆಗೆ ನಾನು ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಿದ್ದೇನೆ’ ಎಂದರು.

2017ರ ಸೆಪ್ಟೆಂಬರ್ ನಲ್ಲಿ ಡುಮಿನಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಏಕದಿನಕ್ಕೂ ವಿದಾಯ ಹೇಳಿದ ಬಳಿಕ ಡುಮಿನಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಮಾತ್ರ ಕೊಂಚ ಕಾಲ ಪಾಲ್ಗೊಳ್ಳಲಿದ್ದಾರೆ.