ಮುಂಬೈ(ಡಿ.20): ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಮಂಗಳವಾರ ಮುಂಬೈನ ಜಮ್‍ನಬಿ ನರ್ಸಿಂಗ್ ಸ್ಕೂಲ್ ಆಯೋಜಿಸಿದ್ದ ವಿಶೇಷ ಚೇತನರ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಹರಿದ ಜೀನ್ಸ್ ಧರಿಸಿ ಟ್ರೋಲ್ ಆಗಿದ್ದಾರೆ.

ಐಶ್ವರ್ಯ ಈ ಕಾರ್ಯಕ್ರಮದಲ್ಲಿ ಟೋರ್ನ್ ಡೆನಿಮ್(ಜೀನ್ಸ್) ಧರಿಸಿ ಅದಕ್ಕೆ ಪಿಂಕ್ ಬಣ್ಣದ ಬ್ಲೇಜರ್ ಧರಿಸಿದ್ದರು. ಈಗ ಐಶ್ವರ್ಯ ಧರಿಸಿದ ಉಡುಪು ಬಗ್ಗೆ ಜನರು ಟ್ರೋಲ್ ಮಾಡ ತೊಡಗಿದ್ದಾರೆ.

ಶಾಲಾ ಕಾರ್ಯಕ್ರಮದಲ್ಲಿ ಐಶ್ವರ್ಯ ಈ ರೀತಿ ಹರಿದ ಜೀನ್ಸ್ ಧರಿಸಿದ್ದು ಸರಿಯಲ್ಲ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಐಶ್ ಈ ಕ್ರೀಡಾಕೂಟದಲ್ಲಿ ವಿಶೇಷ ಚೇತನ ಮಕ್ಕಳನ್ನು ಪ್ರೋತ್ಸಾಹಿಸಿದರು.