ಬೆಂಗಳೂರು(ಮೇ:30): ರಾಜ್ಯದಲ್ಲಿನ ಐರಾವತ ಯೋಜನೆಯ ಫಲಾನುಭವಿಗಳಿಗೆ ಸಿಎಂ ಕುಮಾರಸ್ವಾಮಿಯವರಿಂದ ವಾಹನ ವಿತರಣೆ ಮಾಡಲಾಗಿದ್ದು. ಇಂದು ವಿಧಾನಸೌಧದ ಮುಂಭಾಗದಲ್ಲಿ ವಾಹನ ವಿರತಣೆಗೆ ಸಿಎಂ ಅವರು ಚಾಲನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

225 ಕೋಟಿ ವೆಚ್ಚದ 450 ವಾಹನಗಳನ್ನು ವಿತರಣೆ ಮಾಡಲಾಗಿದ್ದು. ಇದು ರಾಜ್ಯದ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿ ಪೂರಕವಾಗಿರುವುದಲ್ಲದೇ ಐರಾವತ ಯೋಜನಾ ಫಲಾನುಭವಿಗಳಿಗೆ ಸಂತಸ ನೀಡಿದೆ. ಈ ಕಾರ್ಯಕ್ರಮದಲ್ಲಿ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಸಾ.ರಾ ಮಹೇಶ್ ಭಾಗಿಯಾಗಿದ್ದರು.