ಬೆಂಗಳೂರು:(ಫೆ20): ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಏರ್ ಶೋ ನಡೆಯಲಿದೆ. ನಿನ್ನೆ ರಿಹಾರ್ಸಲ್ ವೇಳೆ ಸೂರ್ಯಕಿರಣ ವಿಮಾನಗಳು ಡಿಕ್ಕಿಯ ದುರಂತ ಸಂಭವಿಸಿದ್ದು, ನಿಜಕ್ಕೂ ಬೇಸರದ ಸಂಗತಿ. ಇದರ ಬೆನ್ನಲಿಯೆ ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿದೆ.

ಐದು ದಿನಗಳ ಕಾಲ ನಡೆಯುವ ಏರ್ ಶೋ ನಲ್ಲಿ ಒಂದೊಂದು ಥೀಮ್‍ನನ್ನು ಇಟ್ಟುಕೊಂಡು ಪ್ರದರ್ಶನ ಮಾಡಲಾಗುತ್ತಿದೆ. ಈ ಏರ್ ಶೋ ನಲ್ಲಿ ಭಾರತೀಯ ಪ್ರದರ್ಶಕರು 238 ಜನ, ಅಂತರ ರಾಷ್ಟ್ರೀಯ ಪ್ರದರ್ಶಕರು 165 ಜನ ಪ್ರದರ್ಶಕರು ಭಾಗಿಯಾಗಲ್ಲಿದ್ದಾರೆ.

ಡ್ರೋಣ್ ಒಲಂಪಿಕ್ಸ್, ಜಾಗತೀಕ ಮಟ್ಟದ ಸಿಇಒಗಳ ದುಂಡು ಮೇಜಿನ ಸಮ್ಮೇಳನ, ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಆಫ್ ಚಾಲೆಂಜ್, ರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನ ಸ್ಪರ್ಧೆ, ನಾಲೆಡ್ಜ್ ಇವೆಂಟ್, ಹಾಗೂ ವಿದೇಶಿ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳೊಂದಿಗೆ ವಿಚಾರ ಸಂಕಿರಣ ನಡೆಸಲಾಗುತ್ತಿದೆ. ಏರ್ ಶೋ ನಲ್ಲಿ ವಾಯು ನೆಲೆಯ ಸುತ್ತಮುತ್ತ ಬಗಿ ಭದ್ರತೆಯನ್ನು ಮಾಡಲಾಗಿದೆ.