ಮೈಸೂರು(ಜು:11): ಮೈಸೂರು ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೈದರಾಬಾದ್, ಕೊಚ್ಚಿ ಮತ್ತು ಗೋವಾ ನಗರಗಳಿಗೆ ವಿಮಾನಯಾನ ಸಂಪರ್ಕ ಜುಲೈ 19 ರಿಂದ ಕೇಂದ್ರ ಸರ್ಕಾರದ ಉಡಾನ್ 3 ಯೋಜನೆಯಡಿ ಆರಂಭವಾಗಲಿದೆ. ಏರ್ ಇಂಡಿಯಾದ ಅಂಗಸಂಸ್ಥೆ ಅಲೈಯನ್ಸ್ ಏರ್ ವಿಮಾನ ಹಾರಾಟ ನಡೆಸಲಿದೆ.

ಹೈದರಾಬಾದ್ ಗೆ ಮೈಸೂರಿನಿಂದ ಸಂಜೆ 7.20ಕ್ಕೆ ವಿಮಾನ ಹೊರಟು ರಾತ್ರಿ 9.05ಕ್ಕೆ ತಲುಪಲಿದೆ. ಹೈದರಾಬಾದ್ ನಿಂದ ಮರುದಿನ ಬೆಳಗ್ಗೆ 6.05ಕ್ಕೆ ಹೊರಟು ಮೈಸೂರಿಗೆ ಬೆಳಗ್ಗೆ 7.50ಕ್ಕೆ ತಲುಪಲಿದೆ. ಕೊಚ್ಚಿಗೆ ಹೊರಡುವ ವಿಮಾನ ಮೈಸೂರಿನಿಂದ ಬೆಳಗ್ಗೆ 8.15ಕ್ಕೆ ಹೊರಟು ಬೆಳಗ್ಗೆ 9.45ಕ್ಕೆ ತಲುಪಲಿದೆ. ಕೊಚ್ಚಿಯಿಂದ ಬೆಳಗ್ಗೆ 10.10ಕ್ಕೆ ಹೊರಟು ಮೈಸೂರಿಗೆ 11.40ಕ್ಕೆ ತಲುಪಲಿದೆ. ಗೋವಾಗೆ ಮದ್ಯಾಹ್ನ 3.20ಕ್ಕೆ ಹೊರಟು 4.50ಕ್ಕೆ ತಲುಪಲಿದೆ.ಗೋವಾದಿಂದ ಸಂಜೆ 5.20ಕ್ಕೆ ಹೊರಟು ಮೈಸೂರಿಗೆ 6.50ಕ್ಕೆ ತಲುಪಲಿದೆ.

ಏರ್ ಇಂಡಿಯಾದ ಅಂಗಸಂಸ್ಥೆ ಅಲೈಯನ್ಸ್ ಏರ್ ವಿಮಾನ ಹಾರಾಟ ನಡೆಸಲಿದ್ದು, ಈ ಮೂಲಕ ಮೈಸೂರಿನಿಂದ ಈ ನಗರಗಳಿಗೆ ಪ್ರತಿದಿನ 5 ವಿಮಾನಗಳು ಹಾರಾಟ ನಡೆಸಲಿದ್ದು, ಮೈಸೂರಿನಿಂದ ಈಗಾಗಲೇ ಉಡಾನ್ ಯೋಜನೆಯಡಿ ಬೆಂಗಳೂರು ಮತ್ತು ಚೆನ್ನೈಗೆ ವಿಮಾನ ಸೇವೆಯಿದೆ.