ಬೆಂಗಳೂರು(ಫೆ.20): ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರನ ಆತ್ಮಾಹುತಿ ದಾಳಿ ನಡೆಸಿ 40 ಮಂದಿ ಯೋಧರು ಮೃತಪಟ್ಟ ಬೆನ್ನಲ್ಲೇ ಭಾರತ ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ.

ಹೌದು ಇದೀಗ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋದಲ್ಲಿ ಕೂಡ ಪಾಕಿಸ್ತಾನಕ್ಕೆ ಅವಮಾನ ಮಾಡಲಾಗಿದೆ. ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಇಂದು ಏರ್ ಶೋನಿಂದ ಪಾಕಿಸ್ತಾನ ಹೊರಬಿದ್ದಿದೆ. ಏರ್ ಶೋ ವೇಳೆ 40 ದೇಶದ ರಾಷ್ಟ್ರಧ್ವಜಗಳನ್ನು ಹಾಕಿ ಗೌರವ ಸಮರ್ಪಣೆ ಮಾಡಲಾಗುತ್ತೆ. 40 ದೇಶದ ರಾಷ್ಟ್ರಧ್ವಜವನ್ನು ಹಾರಿಸಿದ್ದು, ಅದರಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹಾರಿಸಿಲ್ಲ. ಇದರಿಂದ ಪಾಕಿಸ್ತಾನಕ್ಕೆ ಏರ್ ಶೋನಲ್ಲೂ ಅವಮಾನವಾಗಿದೆ.

ಸೂರ್ಯಕಿರಣ ವಿಮಾನ ಪತನ ಹಿನ್ನೆಲೆಯಲ್ಲಿ ಆ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇಂದಿನಿಂದ ಫೆ. 24ರ ವರೆಗೆ 5 ದಿನಗಳ ಕಾಲ ಏರ್ ಶೋ ನಡೆಯಲಿದ್ದು ಒಟ್ಟು ಐದು ದಿನಗಳ ಏರ್ ಶೋನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಲಿದ್ದು, ಸಿಎಂ ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿದ್ದಾರೆ.

31 ವಿಮಾನಗಳು ವೈಮಾನಿಕ ಪ್ರದರ್ಶನ ನಡೆಸಲಿವೆ. 17 ವಿಮಾನಗಳು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಈ ಬಾರಿಯೂ ರಫೆಲ್ ಯುದ್ಧ ವಿಮಾನ ಹಾರಾಟ ನಡೆಸಲಿದೆ. ಪ್ರತಿದಿನ ಬೆಳಗ್ಗೆ 10-12 ಹಾಗೂ ಮಧ್ಯಾಹ್ನ 2-5ಗಂಟೆವರೆಗೂ ವೈಮಾನಿಕ ಪ್ರದರ್ಶನ ನಡೆಯಲಿದೆ.

ಇನ್ನು ವುಮೆನ್ಸ್ ಡೇ ದಿನ ಗಗನ ಯಾತ್ರಿ ಸುನಿತಾ ವಿಲಿಯಮ್ಸ್ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.