ನವದೆಹಲಿ(ಮಾ:15): ಪಾಕಿಸ್ತಾನದ ಜೈಷೆ-ಇ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಪಾತಕಿ ಮೌಲಾನ ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡುವ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ರಾಷ್ಟ್ರಗಳ ಪ್ರಸ್ತಾವನೆಗೆ ಚೀನಾ ವಿರೋಧ ವ್ಯಕ್ತಪಡಿಸಿದೆ.

ಭಾರತದ ಜೊತೆಗೆ ಸ್ನೇಹ ಬೆಳೆಸುತ್ತಲೇ ಬೆನ್ನಿಗೆ ಚೂರಿ ಹಾಕುವ ಚೀನಾ, ವಿಶ್ವ ಸಂಸ್ಥೆಯ ಮುಂದೆ ಮತ್ತೆ ನಗೆಪಾಟಲಿಗೆ ಗುರಿಯಾಗಿದೆ. ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವಂತೆ ಭಾರತ ಮಾಡಿದ ಪ್ರಸ್ತಾವನೆಗೆ ವಿಶ್ವ ಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳಾದ ಅಮೇರಿಕಾ,ಬ್ರಿಟನ್,ಫ್ರಾನ್ಸ್,ರಷ್ಯಾ ಸೇರಿದಂತೆ ಇತರೆ ರಾಷ್ಟ್ರಗಳು ಬೆಂಬಲ ಸೂಚಿಸಿದ್ದವು,ಆದರೆ ಚೀನಾ ತನ್ನ ಹಿತಾಸಕ್ತಿಗೋಸ್ಕರ ಇದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮುಂದುವರಿಸಿದೆ.

ಇನ್ನು ಖಾಯಂ ಸದಸ್ಯ ರಾಷ್ಟ್ರಗಳು ಕೂಡ ಚೀನಾದ ಈ ನರಿ ಬುದ್ದಿಯನ್ನು ಖಂಡಿಸಿವೆ. ಭಾರತದಲ್ಲಿ ನಡೆದಿರುವ ಅನೇಕ ದಾಳಿಗಳ ಹಿಂದೆ ಮಸೂದ್ ಅಝರ್ ಕೈವಾಡ ಇರುವುದನ್ನು ಸಾಕ್ಷಿಗಳ ಸಮೇತ ಸಾಬೀತು ಮಾಡಲಾಗಿದೆ,ಆದರೂ ನೀಡಿರುವ ಸಾಕ್ಷಿಗಳು ತೃಪ್ತಿ ತಂದಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ,ಪಾಕಿಸ್ತಾನವನ್ನು ನೀವು ಓಲೈಕೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದೆ.