ನವದೆಹಲಿ(ಮೇ,29): ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ 2 ಕೋಟಿಯ ಫೇರ್‍ನೇಸ್ ಕ್ರಿಮ್ ಜಾಹಿರಾತನ್ನು ನಿರಾಕರಿಸಿದ್ದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಭಾಗವಹಿಸಿದ ಸಾಯಿ ಪಲ್ಲವಿ, ಜಾಹಿರಾತು ನಿರಾಕರಣೆ ಕುರಿತು ಮಾತನಾಡಿದ್ದಾರೆ. ಇದು ನಮ್ಮ ಭಾರತದ ಬಣ್ಣ. ನಾವು ವಿದೇಶಕ್ಕೆ ಹೋಗಿ ನೀವು ಏಕೆ ಬಿಳಿ ಎಂದು ಕೇಳಲು ಆಗುವುದಿಲ್ಲ. ಎಲ್ಲಾ ದೇಶದವರು ತಮ್ಮದೆ ಆದ ಬಣ್ಣವನ್ನು ಹೊಂದಿದ್ದಾರೆ. ಆಫ್ರಿಕಾದವರು ಕಪ್ಪು ಬಣ್ಣವನ್ನು ಹೊಂದಿದ್ದು ಅದರಲ್ಲಿಯೇ ಅವರು ಸುಂದರವಾಗಿ ಕಾಣುತ್ತಾರೆ.

ಅಂತಹ ಜಾಹಿರಾತಿನಲ್ಲಿ ನಟಿಸಿ ಪಡೆದ ಆ ಹಣದಿಂದ ನಾನು ಏನು ಮಾಡಲು ಸಾಧ್ಯ? ನಾನು ಮನೆಗೆ ಹೋಗುತ್ತೇನೆ ಮೂರು ಚಾಪತಿ ಅಥವಾ ಅನ್ನವನ್ನು ತಿನ್ನುತ್ತೇನೆ. ನನ್ನ ಕಾರಿನಲ್ಲಿ ಸುತ್ತಾಡುತ್ತೇನೆ. ಇದರ ಹೊರತು ನನಗೆ ಯಾವುದೆ ದೊಡ್ಡ ಅವಶ್ಯಕತೆಗಳು ಇಲ್ಲ. ನಾನು ಜನರ ಸುತ್ತ ಸಂತೋಷವನ್ನು ನೋಡಲು ಇಷ್ಟಪಡುತ್ತೇನೆ ಅದನ್ನು ಬಿಟ್ಟು ಈ ತರದ ಜಾಹಿರಾತುಗಳಿಂದ ಜನರಿಗೆ ತಪ್ಪು ಮಾಹಿತಿಯನ್ನು ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.