ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಇದೇ ಮೊದಲ ಬಾರಿಗೆ ಕನ್ನಡದ ಚಿತ್ರಕ್ಕೆ ಹಾಡಿದ್ದಾರೆ. ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ” ಬಟರ್‍ಫ್ಲೈ” ಸಿನಿಮಾದ ಹಾಡೊಂದನ್ನು ಅಮಿತಾಬ್ ಹಾಡಿದ್ದಾರೆ.

ಬಟರ್‍ಫ್ಲೈ ಚಿತ್ರದ “ಸುಖವೀವ ಸುರಪಾನವಿದು ಸ್ವರ್ಗ ಸಮಾನಮ್….” ಹಾಡನ್ನು ಅಮಿತಾಬ್ ಹಾಡಿದ್ದಾರೆ. ಇದು ದೇವದಾಸಿ ಚಿತ್ರದ ಹಾಡಾಗಿದ್ದು ಈ ಹಾಡನ್ನು ಮರುಬಳಕೆ ಮಾಡಿಕೊಳ್ಳಲಾಗಿದೆ.

ಈ ಹಾಡನ್ನು ಆಗ ಎಸ್.ಪಿ ಬಾಲಸುಬ್ರಮಣ್ಯಂ ಹಾಡಿದ್ದರು, ಈಗ ಅಮಿತಾಬ್ ಬಚ್ಚನ್ ಅವರು ಹಾಡಿದ್ದಾರೆಂದು ಬಟರ್‍ಫ್ಲೈ ಚಿತ್ರದ ನಾಯಕಿ ಹಾಗೂ ಜಂಟಿ ನಿರ್ಮಾಪಕಿ ಪಾರುಲ್ ಯಾದವ್ ತಿಳಿಸಿದ್ದಾರೆ.