ಮುಂಬೈ:(ಫೆ07): “ಎಬಿಸಿಡಿ3” ಚಿತ್ರ ಈಗಾಗಲೇ ಭಾರೀ ಹವಾ ಮಾಡಿದೆ. ರೆಮೊ ಡಿಸೋಜಾ ನಿರ್ದೇಶನ ಮಾಡಿದ್ದಾರೆ. ಚಿತ್ರದ ಪೋಸ್ಟರ್‍ನಿನಲ್ಲಿ ನಾಯಕ ವರುಣ್ ಧವನ್ ಸಿಕ್ಸ್ ಪ್ಯಾಕ್‍ನಲ್ಲಿ ಸ್ಟ್ರಾಂಗ್‍ಗಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕಿಯಾಗಿ ಶ್ರದ್ದಾ ಕಪೂರ್ ನಟಿಸಿದ್ದು, ಈಗ ಸಿನಿಮಾದ ಫಸ್ಟ್‍ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಅದರಲ್ಲಿ ವರುಣ್ ಧವನ್ ಖಡಕ್‍ಕಾಗಿಕಾಣಿಸಿ ಕೊಳ್ಳುವುದರ ಜೊತೆಗೆ ಚಿತ್ರ ಬಿಡುಗಡೆಯ ದಿನಾಂಕವನ್ನು ಪೋಸ್ಟರ್‍ನಲ್ಲಿ ಮೆನ್‍ಶನ್ ಮಾಡಲಾಗಿದೆ.

ಇದು ನೃತ್ಯ ಕುರಿತ ಸಿನಿಮಾವಾಗಿದ್ದು, ನಾಯಕಿ ಶ್ರದ್ಧಾ ಕಪೂರ್ ಪಾಕಿಸ್ತಾನದ ನೃತ್ಯ ಪಟುವಾಗಿ, ನಾಯಕ ವರುಣ್ ಧವನ್ ಪಂಜಾಬಿನ ನೃತ್ಯ ಕಲಾವಿದರಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ಈಗಾಗಲೇ ಸುದ್ದಿಯಾಗಿರುವಂತೆ ಭಾರತದಲ್ಲಿ “ಬಿಗ್ ಡ್ಯಾನ್ಸ್” ಸಿನಿಮಾವಾಗುತ್ತದೆ ಎಂದು ಕೇಳಿಬಂದಿದ್ದು, ಈಗ ಸಿನಿಮಾ ದಿನಾಂಕವನ್ನು ಪ್ರಕಟಿಸಿದ್ದು, ಸಿನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಂತಾಗಿದೆ.