ಮೇಘಾಲಯ(ಜ:17): ಮೇಘಾಲಯದಲ್ಲಿ ಗಣಿ ದುರಂತ ಸಂಭವಿಸಿ ಒಂದು ತಿಂಗಳ ನಂತರ ನೌಕಾದಳ ಹಾಗೂ ಎನ್ ಡಿ ಆರ್ ಎಫ್ ಸುಬ್ಬಂದಿಗಳ ಸಹಾಯದಿಂದ ಓರ್ವ ಕಾರ್ಮಿಕನ ಮೃತದೇಹವನ್ನು ಹೊರತೆಗೆಯಲಾಗಿದೆ.

ಯು ಡಬ್ಲ್ಯೂ ಆರ್ ಓವಿ ಯಂತ್ರದ ಸಹಾಯದಿಂದ ಜೈಂತಿಯಾ ಹಿಲ್ಸ್ ನಲ್ಲಿ ಸಿಲುಕಿ ಮೃತಪಟ್ಟ ಗಣಿ ಕಾರ್ಮಿಕನ ದೇಹವನ್ನು ಪತ್ತೆಮಾಡಿ ಹೊರತೆಗೆಯಲಾಗಿದೆ,ಉಳಿದ ಕಾರ್ಮಿಕರ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಡಿ.13 ರಂದು ಕಾರ್ಮಿಕರು ನದಿ ಸಮೀಪದಲ್ಲಿ ಭೂಮಿ ಅಗೆದಾಗ ನೀರು ಅವರಿದ್ದ ಪ್ರದೇಶವನ್ನು ಆವರಿಸಿಕೊಂಡಿತ್ತು,ಇದರ ಪರಿಣಾಮ ಸುಮಾರು 20 ಕಾರ್ಮಿಕರು ನೀರಿನಲ್ಲಿ ಸಿಲುಕಿದ್ದರು,ಈ ಪೈಕಿ ಕೇವಲ 5 ಮಂದಿ ಮಾತ್ರ ಮೇಲೆ ಬರಲು ಸಾಧ್ಯವಾಯಿತು,15 ಜನ ಅಲ್ಲೇ ಸಿಲುಕಿದ್ದರು.