ಗೋವಾ ಬೀಚ್‍ನಲ್ಲಿ ಎಂಜಾಯ್ ಮಾಡ್ಬೇಕು ಅಂತ್ಕೊಂಡಿದ್ರೆ ಈ ಸ್ಟೋರಿನ ಒಂದು ಸಾರಿ ಓದಿ

ಪಣಜಿ:(ಜ25): ಗೋವಾ ಸರ್ಕಾರವು ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ. ಗೋವಾ ಬೀಚ್‍ನಲ್ಲಿ ಎಣ್ಣೆ ಪಾರ್ಟಿಗೆ ಬ್ರೇಕ್ ಬಿದ್ದಿದೆ.

ಸಾರ್ವಜನಿಕವಾಗಿ ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲಿನ ಸರ್ಕಾರ ವಾಣಿಜ್ಯ ಕಾಯ್ದೆಗೆ ತಿದ್ದುಪಡಿ ತಂದಿದೆ.

ಈ ನಿಯಮವನ್ನು ಉಲ್ಲಂಘಿಸಿದರೆ ಹತ್ತು ಸಾವಿರದವರೆಗೆ ದಂಡ ಹಾಗು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಒಂದು ವೇಳೆ ನಿಯಮ ಉಲ್ಲಂಘಿಸಿ ದಂಡ ನೀಡಲು ವಿಳಂಬ ಮಾಡಿದರೆ, ಮೂರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ವಿಸ್ತರಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಮನೋಹರ್ ಆಜ್ಗಾಂಕರ್ ತಿಳಿಸಿದ್ದಾರೆ.