ಬೆಂಗಳೂರು(ನ.22) ಕನ್ನಡದ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿಯು ಸದ್ಯದ ದಿನಗಳಲ್ಲಿ ಕಿರುತೆರೆ ಇತಿಹಾಸದಲ್ಲೇ ಹೊಸ ಟ್ರೆಂಡ್ ಸೃಷ್ಠಿಸಿದ್ದು, ದಾಖಲೆಯನ್ನು ನಿರ್ಮಿಸಿದೆ.

ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾದ ಮೊದಲ ವಾರದಲ್ಲೇ ಇದುವರೆಗೆ ಯಾವ ಧಾರವಾಹಿಯೂ ಪಡೆಯದಷ್ಟು ಟಿಆರ್ ಪಿಯನ್ನು ಪಡೆದುಕೊಂಡು ಇಂದಿನವರೆಗೂ ಅದನ್ನೇ ಕಾಯ್ದುಕೊಂಡು ಬರುತ್ತಿದೆ.

ನಿರ್ದೇಶಕ ಅರೂರ್ ಜಗದೀಶ್ ಅವರ ಈ ಧಾರವಾಹಿಯಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಅವರು ಆರ್ಯವರ್ಧನ್ ಆಗಿ ಮಿಂಚುತ್ತಿದ್ದರೆ, ಅವರಿಗೆ ಜೋಡಿಯಾಗಿ ಅನು ಎನ್ನುವ ಉದಯೋನ್ಮುಖ ನಟಿ ಪಾತ್ರಧಾರಿಯೂ ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗಿದ್ದರೆ

ಒಂದು ಮಧ್ಯಮ ವರ್ಗದ ಸಂಸಾರ ಮತ್ತು ಶ್ರೀಮಂತ ಸಂಸಾರದಲ್ಲಿ ನಡೆಯುವ ದೃಶ್ಯಾವಳಿಗಳನ್ನು ನೈಜವೇನೋ ಎಂಬಂತೆ ತೋರಿಸುತ್ತಿರುವುದು ಈ ಧಾರವಾಹಿಯ ಪ್ಲಸ್ ಪಾಯಿಂಟ್. ಇದೀಗ ಈ ಧಾರವಾಹಿ ತನ್ನದೇ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದ್ದೆ.

ಪ್ರಾರಂಭದಲ್ಲಿ 11.5 ಟಿಆರ್ ಪಿ ಪಡೆದಿದ್ದ ‘ಜೊತೆ ಜೊತೆಯಲಿ’ ಧಾರಾವಾಹಿ ಬಳಿಕ 13.5 ಕ್ಕೆ ಟಿಆರ್ ಪಿ ಪಡೆದುಕೊಂಡಿತ್ತು. ಈ ವಾರ ಅದನ್ನೂ ಮೀರಿ 15.2 ಟಿಆರ್ ಪಿ ಅಂಕ ಪಡೆದು ಹೊಸ ದಾಖಲೆಯನ್ನು ಮಾಡಿದೆ. ಈ ಖುಷಿಯನ್ನು ನಟ ಅನಿರುದ್ಧ್ ಅವರು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿರುವ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.