ನವದೆಹಲಿ(ಜ:12): ಮೇಲ್ವರ್ಗದ ಬಡವರಿಗೆ ಮೀಸಲಾತಿ ಮಾಡಲು ಸೂಚಿಸಿರುವ 8 ಲಕ್ಷ ರೂ. ವಾರ್ಷಿಕ ಆದಾಯದ ಮಿತಿ ಹಾಗೂ 5 ಎಕರೆ ಜಮೀನಿನಂತಹಾ ಮಾನದಂಡಗಳು ಅಂತಿಮವಲ್ಲ,ನಿಯಮಗಳನ್ನು ರೂಪಿಸುವಾಗ ಬದಲಾವಣೆ ಆಗಬಹುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ಚಂದ್ ಗೆಹ್ಲೋಟ್‌ ಸ್ಪಷ್ಟಪಡಿಸಿದ್ದಾರೆ.

ಈ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು 8 ಲಕ್ಷದ ಅಆದಾಯ ಮಿತಿ,5 ಎಕರೆ ಜಮೀನಿನ ಮಿತಿ ಹಾಗೂ ಇನ್ನಿತರೇ ಮಾನದಂಡಗಳು ಪರಿಶೀಲನೆಯಲ್ಲಿವೆ ಅಷ್ಟೇ ಹೊರತು ಅವು ಅಂತಿಮವಲ್ಲ,ಅವುಗಳು ಹೆಚ್ಚು ಕಡಿಮೆಯಾಗಬಹುದು ಎಂದು ತಿಳಿಸಿದ್ದಾರೆ.

ಉಭಯ ಸದನಗಳಲ್ಲೂ ಮೀಸಲು ಮಸೂದೆ ಅಂಗೀಕಾರವಾಗಿರುವ ಹಿನ್ನಲೆ,ಇನ್ನೊಂದು ವಾರದಲ್ಲಿ ಸಾಮಾಜಿಕ ನ್ಯಾಯ ಸಚಿವಾಲಯ ನಿಯಮಗಳನ್ನು ರೂಪಿಸಲಿದೆ,ತಮ್ಮದೇ ಆದ ಮಾನದಂಡ ರೂಪಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ರಾಜ್ಯಗಳು ಹೇಗೆ ನಿಯಮಗಳನ್ನು ರೂಪಿಸುತ್ತವೆ ಎಂಬುದನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.