ವಾಷಿಂಗ್ಟನ್(ಫೆ:13): ಜಗತ್ತಿನ ವೇಗದ ಓಟದ ಮೂಲಕ ವಿಶ್ವ ದಾಖಲೆ ಬರೆದಿರುವ ಉಸೈನ್ ಬೋಲ್ಟ್ 9.58 ಸೆಕೆಂಡುಗಳಿಗೆ 100 ಮೀಟರ್ ಊದಿ ದಾಖಲೆ ನಿರ್ಮಿಸಿರುವುದು ನಮಗೆಲ್ಲಾ ಗೊತ್ತಿರುವ ಸಂಗತಿ,ಆದರೆ 7 ವರ್ಷದ ಬಾಲಕ ರುಡಾಲ್ಫ್ ಇನ್ ಗ್ರಾಮ್ ಎಂಬ ಬಾಲಕನೊಬ್ಬ ಕೇವಲ 13.48 ಸೆಕೆಂಡುಗಳಲ್ಲಿ ಓಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾನೆ.

ಈ ಬಾಲಕ ಕಳೆದ 2 ಅಮೆಚೂರ್ ಅಥ್ಲೆಟಿಕ್ ಯೂನಿಯನ್ ಟೂರ್ನಿಯಲ್ಲಿ 20 ಚಿನ್ನದ ಪದಕಗಳು ಸೇರಿದಂತೆ ಒಟ್ಟು 36 ಪದಕಗಳನ್ನು ಗೆದ್ದಿರುವ ಸಾಧನೆ ಮಾಡಿದ್ದಾನೆ .