ಬೀದರ್(ಜೂನ್ . 27) ಗ್ರಾಮ ವಾಸ್ತವ್ಯ ಮತ್ತು ಜನತಾದರ್ಶನದಲ್ಲಿರುವ ಸಿಎಂ ಕುಮಾರಸ್ವಾಮಿ ಅವರು ಇಂದು ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ಭೇಟಿ ನೀಡಿದರು.

ಬಸವ ಕಲ್ಯಾಣದ ಛಿಲ್ಲಾ ಗಲ್ಲಿಯಲ್ಲಿ ಮನೆ ಕುಸಿತದಿಂದಾಗಿ ಬುಧವಾರ ಒಂದೇ ಕುಟುಂಬದ ಆರು ಜನ ಮೃತಪಟ್ಟಿದ್ದು ಅವರ ಕುಟುಂಬದ ಮುಖ್ಯಸ್ಥರಾದ ಇಸೂಫ್ ಬಕರೆ ವಾಲೆ ಅವರಿಗೆ ಸಿಎಂ ಕುಮಾರಸ್ವಾಮಿ ಅವರು 24 ಲಕ್ಷ ರೂ.ಗಳ ಚೆಕ್ಕುಗಳ ವಿತರಣೆಯನ್ನು ಮಾಡಿದರು. ಮನೆ ಕುಸಿತದಿಂದ ಮೃತಪಟ್ಟಿರುವ ಕುಟುಂಬದ ಸದಸ್ಯರಿಗೆ ಸಿಎಂ ಕುಮಾರಸ್ವಾಮಿ ಸಾಂತ್ವನ ಹೇಳಿದರು.

ಇನ್ನು ಮೃತಪಟ್ಟವರು ಹಣ್ಣಿನ ವ್ಯಾಪಾರಿ ನದೀಮ್ ಶೇಖ್ ಯೂಸುಫ್, ಫರೀದಾ ಬೇಗಂ, ಆಯುಷಾ ಬೇಗಂ, ಮೆಹತಾಬಿ, ಗೌಸಿಯಾ, ಫೈಜಾನ್ ಅಲಿ, ಹಾಗೂ ಫರಾನ್ ಅಲಿ ಎಂದು ಹೇಳಲಾಗಿದೆ. ಕುಟುಂಬಕ್ಕೆ ಸೇರಿದ ಇನ್ನೊಬ್ಬ ಇಸೂಪ್ ಬಕರೆ ವಾಲೆ ಅವರು ಮುಂಬೈ ಗೆ ಹೋಗಿದ್ದರಿಂದ ಸಾವಿನಿಂದ ಬಚಾವಾಗಿದ್ದಾರೆ. ಪೋಲೀಸರ ಸಹಾಯದಿಂದ ಶವವನ್ನು ಹೊರತೆಗೆಯಲಾಯಿತು.