ಮಡಿಕೇರಿ(ಜ:04): ಬೆಟ್ಟ ಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದ ಸುಮಾರು 5 ಸಾವಿರ ಮನೆಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ.

ನೂರಾರು ಜನರು ಇಂದಿಗೂ ಕತ್ತಲೆಯ ಜೀವನವನ್ನು ನಡೆಸುತ್ತಿದ್ದು ರಾತ್ರಿ ವೇಳೆ ಸೀಮೆಎಣ್ಣೆ ದೀಪವೇ ಅವರಿಗೆ ಆಸರೆಯಾಗಿದೆ. ಗುಡ್ಡಗಳ ಮೇಲೆ ಮನೆಗಳು, ಒಂಟಿ ಮನೆಗಳು ಇರುವ ಕಾರಣದಿಂದಾಗಿ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎಂದು ಸೆಸ್ಕ್ ಸಿಬ್ಬಂದಿಗಳು ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಬೆಳಕು ಪಡೆಯುವ ನಿರೀಕ್ಷೆಯಲ್ಲಿ ಇಲ್ಲಿಯವರೆಗೂ 4,200 ಕ್ಕೂ ಹೆಚ್ಚು ಕುಟುಂಬಗಳು ಅರ್ಜಿ ಸಲ್ಲಿಸಿದ್ದು,ಅರ್ಜಿಗಳ ಪರಿಶೀಲನೆ ಪ್ರಗತಿಯಲ್ಲಿದೆ ಮಳೆಗಾಲಕ್ಕೂ ಮುಂಚಿತವಾಗಿ ‘ಸೌಭಾಗ್ಯ’ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಸೆಸ್ಕ್ ಕಾರ್ಯನಿರ್ವಾಹಣಾ ಎಂಜಿನಿಯರ್ ತಿಳಿಸಿದ್ದಾರೆ.