ಹೊಸಪೇಟೆ(ಆಗಸ್ಟ್.13) ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಭಾಗದ ಜನರ ಜೀವನದಿ ತುಂಗಭದ್ರಾ ಜಲಾಶಯ ಈ ವರ್ಷ ಮೈದುಂಬಿಕೊಳ್ಳುತ್ತದೆ ಎಂದು ಯಾರು ಊಹೆ ಮಾಡಿರಲಿಲ್ಲ. ಆದರೆ ಇಂದು ಈ ಜಲಾಶಯಕ್ಕೆ ಕೇವಲ 5 ದಿನಗಳಲ್ಲಿ 50 ಟಿಎಂಸಿ ನೀರು ಹರಿದು ಬಂದಿದೆ.

ಈಗ ಆಣೆಕಟ್ಟು ಸಂಪೂರ್ಣ ಭರ್ತಿಯಾಗಿದ್ದು ಅಪಾರ ಪ್ರಮಾಣದ ನೀರನ್ನು ಪಕ್ಕದ ಆಂದ್ರಕ್ಕೆ ಹರಿಬಿಡಲಾಗಿದೆ. ಮಳೆಗಾಲ ಆರಂಭವಾಗಿದ್ದರೂ ಕಳೆದ ಎರಡು ತಿಂಗಳುಗಳಿಂದ ಸರಿಯಾಗಿ ಮಳೆಯಾಗದೆ ಜಲಾಶಯ ಬತ್ತಿಹೋಗಿ ಜನರಿಗೆ ಕುಡಿಯಲು ನೀರು ಸಹ ಸಿಗದ ಪರಿಸ್ಥಿತಿ ಬಂದೊದಗಿತ್ತು. ಕಳೆದ ಜೂನ್, ಜುಲೈನಲ್ಲಿ ಒಂದಿಷ್ಟು ನೀರು ಹರಿದು ಬಂದಿತ್ತಾದರೂ ನೀರನ್ನು ಉಪಯೋಗಿಸಲಾಗದ ಪರಿಸ್ಥಿತಿ ಬಂದಿತ್ತು .

ಆದರೆ ಕಳೆದ ಒಂದು ವಾರದಿಂದ ಮಲೆನಾಡು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದ ಮಳೆ ಬಂದಿರುವ ಕಾರಣ ತುಂಗಭದ್ರಾ ಜಲಾಶಯಕ್ಕೆ 5 ದಿನಗಳಲ್ಲಿ 50 ನೀರು ಹರಿದು ಬಂದಿದೆ. ಇಂದು ಜಲಾಶಯ ಭರ್ತಿ ಆಗಿದ್ದು, ಜಲಾಶಯದ ಎರಡು ನಾಲೆಗಳಿಗೆ ನೀರನ್ನು ಹರಿಬಿಡಲಾಗಿದೆ. ನಾಲೆಗಳಿಗೆ ನೀರು ಹರಿಬಿಟ್ಟಿರುವದರಿಂದ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.