ಪ್ರಯೋಗ್ ರಾಜ್(ಜ:15): ಗಂಗಾ,ಯಮುನಾ ಗುಪ್ತಗಾಮಿನಿ ಮತ್ತು ಸರಸ್ವತಿ ನದಿಗಳ ಸಂಗಮವೆನಿಸಿದ ಪ್ರಯೋಗ್ ರಾಜ್ ನಲ್ಲಿ 50 ದಿನಗಳ ಕಾಲ ನಡೆಯಲಿರುವ ಕುಂಭಮೇಳಕ್ಕೆ ಸಾಕ್ಷಿಯಾಗಲು ಭಕ್ತ ಸಾಗರವೇ ಹರಿದುಬರುತ್ತಿದೆ.

ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಸಮಾಗಮವೆನಿಸಿರುವ ಈ ಕುಂಭಮೇಳ ಮಹಾಶಿವರಾತ್ರಿಯಂದು ಕೊನೆಗೊಳ್ಳಲಿದೆ. ಸಂಕ್ರಾಂತಿ ದಿನವೇ ಕುಂಭಮೇಳ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ,ಮೊದಲ ದಿನವೇ ಪುಣ್ಯಸ್ನಾನ ಮಾಡಲು ಲಕ್ಷಾಂತರ ಜನರು ನೆರೆದಿದ್ದಾರೆ.

ಈ ಕುಂಭಮೇಳಕ್ಕೆ 50 ದಿನಗಳಲ್ಲಿ 12 ಕೋಟಿ ಜನ ಆಗಮಿಸುವ ನಿರೀಕ್ಷೆಯಿದ್ದು. 4,300 ಕೋಟಿ ರೂಗಳನ್ನು ಉತ್ತರ ಪ್ರದೇಶದ ಸರ್ಕಾರ ವೆಚ್ಚ ಮಾಡಲಿದೆ ಎಂದು ತಿಳಿದು ಬಂದಿದೆ.ಬಿಗಿ ಬಂದೋಬಸ್ತ್ ಗಾಗಿ 24,000 ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನೇಮಿಸಲಾಗಿದೆ.