ನವದೆಹಲಿ(ಜ17): ಬೃಹತ್ ಪ್ರತಿಭಟನೆಯ ನಡುವೆಯು ಶಬರಿಮಲೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದ, ಬಿಂದು ಮತ್ತು ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಪೊಲೀಸ್ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ನಮ್ಮ ಜೀವನ ಅಪಾಯದಲ್ಲಿದ್ದು, ಜೇವಬೆದರಿಕೆ ಎದುರಾಗಿರುವ ಕಾರಣ ನಮಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ನ್ಯಾಯಲಯಕ್ಕೆ ತಿಳಿಸಿದ್ದಾರೆ.

ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಇಗಾಗಲೇ ಪೊಲೀಸ್ ರಕ್ಷಣೆಯನ್ನು ಒದಗಿಸುವಂತೆ ಕೊರ್ಟ್‍ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಕುರಿತು ನ್ಯಾಯಾಧೀಶರು ಶುಕ್ರವಾರ ನಿರ್ಧಾರ ತಿಳಿಸಲಿದ್ದಾರೆ.ದೇವಾಲಯ ಪ್ರವೇಶಿಸಿ ಹಿಂದಿರುಗಿದ ನಂತರ ಕನಕದುರ್ಗಾ ತನ್ನ ಕುಟುಂಬದವರಿಂದ ಹಲ್ಲೆಗೆ ಒಳಗಾಗಿ ಮಲಪುರಂ ಜಿಲ್ಲೆಯ ಪೆರಿಂಥಾಲ್ಮನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವಾಲಯದೊಳಗೆ ಕನಕಾದುರ್ಗಾ ಮತ್ತು ಬಿಂದು ಅವರ ಪ್ರವೇಶದ ನಂತರ ಕೇರಳದಲ್ಲಿ ಭಾರೀ ಹಿಂಸಾಚಾರ ಉಂಟಾಗಿ ಸುಮಾರು 3 ಸಾವಿರ ಜನರನ್ನು ಬಂಧಿಸಲಾಗಿತ್ತು. 2018 ಸೆಪ್ಟೆಂಬರ್ ನಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಾಲಯವನ್ನು ಪ್ರವೇಶಿಸಬಹುದು ಎಂದು ತೀರ್ಪನ್ನು ನೀಡಿತ್ತು. ಈ ತೀರ್ಪಿನಿಂದ ಕೆರಳಿದ ಸಂಪ್ರದಾಯವಾದಿಗಳು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಕೈಗೊಂಡಿದ್ದು, ಇದು ಹಿಂಸಾಚಾರಕ್ಕೆ ತಿರುಗಿತ್ತು.