ನವದೆಹಲಿ(ಜೂನ್,17): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರ ಪಡೆದಿದೆ. ಸರ್ಕಾರದ ಮೊದಲ ಸಂಸತ್ ಕಲಾಪ ನಾಳೆಯಿಂದ ಆರಂಭವಾಗಲಿದ್ದು, ಮಹತ್ವದ ಹಲವು ವಿಧೇಯಕಗಳ ಮಂಡನೆಯಾಗುವ ಸಾಧ್ಯತೆಗಳಿವೆ.

ಅಧಿವೇಶನದಲ್ಲಿ ಬಜೆಟ್ ಮತ್ತು ತ್ರಿವಳಿ ತಲಾಖ್ ಕುರಿತಾದ ಹೊಸ ಬಿಲ್ ಮಂಡನೆಗೆ ಪ್ರಮುಖ್ಯತೆ ನೀಡಲಾಗುತ್ತಿದೆ. ಈ ಬಾರಿಯೂ ಕಾಂಗ್ರೆಸ್ ಪಕ್ಷವೇ ಸಂಸತ್‍ನಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದು, ಎನ್.ಡಿ.ಎ ವಿರುದ್ಧ ಯಾವ ಕಾರ್ಯತಂತ್ರ ಹಣೆದಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ತ್ರಿವಳಿ ತಲಾಖ್ ತಡೆ ವಿಧೇಯಕ ಸೇರಿದಂತೆ ಹಲವು ಪ್ರಮುಖ ವಿಧೇಯಕಗಳ ಅಂಗೀಕಾರಕ್ಕೆ ಸಹಕರಿಸುವಂತೆ ಸರ್ಕಾರ ಪ್ರತಿಪಕ್ಷಗಳ ಬೆಂಬಲ ಕೇಳಲಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಮಸೂದೆ ಜಾರಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು. 17ನೇ ಲೋಕಸಭೆಯ ಮೊದಲ ಮುಂಗಾರು ಅಧಿವೇಶನಲ್ಲಿಯೇ ಕೇಂದ್ರ ಸರ್ಕಾರ, ತ್ರಿವಳಿ ತಲಾಖ್ ನಿಷೇಧದ ಕುರಿತಾದ ಹೊಸ ಮಸೂದೆಯನ್ನು ಮಂಡಿಸಲಿದೆ ಎನ್ನಲಾಗಿತ್ತು.

ಕೇಂದ್ರ ಸರ್ಕಾರ ಈ ಹಿಂದೆಯೇ ತ್ರಿವಳಿ ತಲಾಖ್ ನಿಷೇಧದ ಹೊಸ ಮಸೂದೆ ಜಾರಿಗೆ ತರಬೇಕಿತ್ತು. ಈ ಮುನ್ನವೇ 16ನೇ ಲೋಕಸಭೆ ಅವಧಿ ಮುಕ್ತಾಯ ಮತ್ತು ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಗದ ಕಾರಣ ಅದು ಮಂಡನೆಯಾಗಿರಲಿಲ್ಲ. 16ನೇ ಲೋಕಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು. ಆದರೆ, ಮಸೂದೆಯನ್ನು ಸೆಲೆಕ್ಟ್ ಕಮಿಟಿಯ ಪರಿಶೀಲನೆಗೆ ಕೊಡಬೇಕೆಂದು ವಿಪಕ್ಷಗಳು ಆಗ್ರಹ ಮಾಡಿದ್ದವು. ಬಳಿಕ ರಾಜ್ಯಸಭೆಯಲ್ಲಿ ಕೂಡ ವಿಪಕ್ಷಗಳ ಗದ್ದಲದ ನುಡವೇ ಇತ್ಯರ್ಥವಾಗದೇ ಹೋದರು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.