ಡೆಹ್ರಾಡೂನ್ (ಡಿ :೨೪): ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಪ್ರೇಮಿಯೊಬ್ಬ ೧೮ ವರ್ಷದ ಯುವತಿಯನ್ನು ಸಜೀವ ದಹನ ಮಾಡಿದ್ದಾನೆ .೮೦ರಷ್ಟು ಭಾಗ ಸುಟ್ಟು ಹೋಗಿದ್ದ ಯುವತಿಯನ್ನು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಉತ್ತರಾಖಂಡದ ಮುಖ್ಯಮಂತ್ರಿಯ ಆದೇಶದ ಮೇರೆಗೆ ಸಫ್ತರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು . ಸತತ ಆರು ದಿನಗಳ ಕಾಲ ನರಳಾಡಿದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗಿನಜಾವ ಕೊನೆಯುಸಿರೆಳೆದಿದ್ದಾಳೆ . ಯುವತಿಯನ್ನು ದಹಿಸಿದ ಆರೋಪಿ ಮನೋಜ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ, ವಿಚಾರಣೆಯ ಸಂಧರ್ಭದಲ್ಲಿ ಆತ ವಿವಾಹಿತ ಎಂದು ತಿಳಿದು ಬಂದಿದೆ .