ಬೆಂಗಳೂರು(ಜ:12): ಬೆಂಗಳೂರು-ವಿಜಯವಾಡ ಮಾರ್ಗದ ಐರಾವತ ಬಸ್ಸಿನಲ್ಲಿ ಶುಕ್ರವಾರ ಅಕ್ರಮವಾಗಿ ಸಾಗಿಸುತ್ತಿದ್ದ 15 ಲಕ್ಷ ರೂ. ಬೆಲೆಬಾಳುವ ಬೆಳ್ಳಿ ದೀಪಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದಕ್ಕೆ ಸಂಬಂಧಪಟ್ಟ ಬಸ್ ಚಾಲಕನನ್ನು ಹಾಗೂ ನಿರ್ವಾಹಕನನ್ನು ಅಮಾನತುಗೊಳಿಸಿ ಕೆ ಎಸ್ ಆರ್ ಟಿ ಸಿ ಆದೇಶ ಹೊರಡಿಸಿದೆ.

ಬೆಂಗಳೂರು ಘಟಕದ ಕೆಎ 57,ಎಫ್ 2844 ನಂಬರ್ ನ ಬಸ್ ಚಾಲಕ ನಿರ್ವಾಹಕನ ಮೇಲೆ ಸಂಶಯ ಬಂದ ಕಾರಣ ಹೊಸಕೋಟೆ ಬಳಿಯ ಟೋಲ್ ನಲ್ಲಿ ತಪಾಸಣೆ ನಡೆಸಲಾಯಿತು. ಬಸ್ ನ ಡಿಕ್ಕಿಯಲ್ಲಿ 40.950 ಕೇಜಿ ತೂಕದ 699 ಬೆಳ್ಳಿ ದೀಪಗಳು ಪತ್ತೆಯಾಗಿದ್ದು,ಈ ಬಗ್ಗೆ ವಿಚಾರಿಸಿದಾಗ ವಾರಸದಾರ ಯಾರು ಎಂಬುದು ತಮಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

ವಿಭಾಗದ ನಿಯಂತ್ರಣಾಧಿಕಾರಿ ಪ್ರಭಾಕರ್ ರೆಡ್ಡಿ,ವಿಭಾಗೀಯ ಭದ್ರತಾ ನಿರೀಕ್ಷಕಿ ರಮ್ಯಾ ಸಿ.ಕೆ,ಸಂಚಾರ ನಿಯಂತ್ರಕ ಛಲಪತಿ ಹೆಚ್.ಎಂ ಈ ತಪಾಸಣೆ ನಡೆಸಿ ಕ್ರಮಕೈಗೊಂಡಿದ್ದಾರೆ.