ಮುಂಬೈ(ಜ:30): ಯುವ ಜನತೆಯಲ್ಲಿ ಆಕ್ರಮಣ ಮತ್ತು ಹತ್ಯೆಯ ಮನೋಭಾವನೆಯನ್ನು ಪ್ರಚೋದಿಸುವ ಶೂಟರ್ ಗೇಮ್ ಪಬ್‌ಜಿಯನ್ನು ಕೂಡಲೇ ನಿಷೇಧಿಸುವಂತೆ 11 ವರ್ಷದ ಬಾಲಕ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ.

ಪ್ಲೇಯರ್ ಅನ್ನೌನ್ಸ್ ಬ್ಯಾಟಲ್‌ಗ್ರೌಂಡ್ಸ್ ಎಂಬ ಆನ್ಲೈನ್ ಗೇಮ್ ಪಬ್‌ಜಿ ಎಂದೇ ಖ್ಯಾತಿಯಾಗಿದೆ,ಇದು ಹಿಂಸೆ ಮತ್ತು ಸೈಬರ್ ಬೆದರಿಕೆಯನ್ನು ಉತ್ತೇಜಿಸುವುದರಿಂದ ತಕ್ಷಣವೇ ಇದನ್ನು ನಿಷೇಧಿಸಬೇಕು ಎಂದು ಸರ್ಕಾರಕ್ಕೆ ನಾಲ್ಕು ಪುಟಗಳ ಪತ್ರ ಬರೆದು ಗಮನ ಸೆಳೆದಿದ್ದಾನೆ.

ಇದುವರೆಗೂ ಈ ಪತ್ರಕ್ಕೆ ಯಾವ ಪ್ರತಿಕ್ರಿಯೆಯೂ ಬಾರದ ಕಾರಣ ಮುಂಬೈ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಬಾಲಕ ನಿರ್ಧರಿಸಿದ್ದಾರೆ.