ಬೆಂಗಳೂರು:(ಫೆ07): ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿರುವ, ಸುರೇಶ್ ಬಾಬು, ಶಂಕರಪ್ಪ, ರಮೇಶ್ ಬಾಬು ನಿರ್ಮಾಣ ಮಾಡಿರುವ ಸ್ಟ್ರೈಕರ್ ಚಿತ್ರ ಫೆಬ್ರುವರಿ 22 ಕ್ಕೆ ತೆರೆಕಾಣುತ್ತಿದೆ.

ನಟ ಪ್ರವೀಣ್ ತೇಜ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಸೈಕಲಾಜಿಕಲ್ ಸಸ್ಪೆನ್ಸ್ ಸಿನಿಮಾವಾಗಿದೆಯಂತೆ. ಇದರಲ್ಲಿ ಶಿಲ್ಪಾ ಮಂಜುನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರಂತೆ.

ಗರುಡಾದ್ರಿ ಆಟ್ರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಹೊಸ ಕಥೆಯೊಂದು ತೆರೆ ಮೇಲೆ ತರಲಾಗಿದೆ ಎನ್ನಲಾಗಿದೆ.

ನಾಯಕನಿಗೆ ಪ್ರತಿಯೊಂದು ಘಟನೆ ನೋಡಿದರು ಈ ಹಿಂದೆ ಈ ಘಟನೆ ನಡೆದಿತ್ತಲ್ಲ ಎಂಬಂತೆ ಭಾಸವಾಗುತ್ತಂತೆ. ಒಟ್ಟಾರೆ ಡಿಫ್ರೆಂಟ್ ಸ್ಟೋರಿಯ “ಸ್ಟ್ರೈಕರ್” ಸಿನಿಮಾ ತೆರೆಗೆ ಬರಲು ಕೆಲವೇ ದಿನಗಳು ಬಾಕಿಯಿವೆ.