WhatsApp Image 2018-04-13 at 10.49.57 AM

ಅಗ್ಗದ ಇಂಟರ್ನೆಟ್, ಸ್ಮಾರ್ಟ್‍ಫೋನ್ ಹಾಗೂ ಅಗ್ಗದ ಮೊಬೈಲ್ ಫೋನ್‍ಗಳ ಮೂಲಕ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ರಿಲಯನ್ಸ್ ಜಿಯೋ ಕಂಪನಿಯು ಸಿಮ್ ಇರುವ ಲ್ಯಾಪ್‍ಟಾಪ್‍ನ್ನು ಪರಿಚಯಿಸುತ್ತಿದೆ. ಇನ್‍ಬಿಲ್ಟ್ ಅಂತರ್ಜಾಲ ಸಂಪರ್ಕ ಮತ್ತು ದೂರ ಸಂಪರ್ಕ ಹೊಂದಿರುವ ಲ್ಯಾಪ್‍ಟಾಪ್ ಇದಾಗಿದೆ. ಇದಕ್ಕಾಗಿ ಅಮೆರಿಕಾದ ಕ್ವಾಲ್ಕಮ್ ಚಿಪ್ ತಯಾರಿಕಾ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ. ಭಾರತದ ಮಾರುಕಟ್ಟೆಗೆ ಹೊಂದುವಂತಹ ಹಾಗೂ ವಿಂಡೋಸ್ 10 ಹೊಂದಿರುವ ಸಿಮ್ ಲ್ಯಾಪ್‍ಟಾಪ್‍ನ್ನು ತಯಾರಿಸಿ ನೀಡುವಂತೆ ಕೇಳಿದೆ.
ಸಿಮ್ ಇರುವ ಲ್ಯಾಪ್‍ಟಾಪ್‍ಗೆ ವೈಫೈ, ಮೊಬೈಲ್ ಹಾಟ್‍ಸ್ಪಾಟ್, ಇಂಟರ್ನೆಟ್ ಡಾಂಗಲ್ ಮುಂತಾದವುಗಳ ಮೂಲಕ ಇಂಟರ್ನೆಟ್ ಸಂಪರ್ಕ ನೀಡುವ ಅಗತ್ಯವಿಲ್ಲ. ಜೊತೆಗೆ ಲ್ಯಾಪ್‍ಟಾಪ್‍ನಲ್ಲಿ ಫೋನ್ ಸೌಲಭ್ಯಗಳನ್ನು ಪಡೆಯಬಹುದು.