ಬೆಂಗಳೂರು:(ನ05); ನಟ ಪ್ರಕಾಶ್ ರೈ ಶಬರಿ ಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೇಳಿಕೆ ನೀಡಿದ್ದಾರೆ.

ಮಹಿಳೆಯರು ನೋಡದ ದೇವರು ದೇವರೆ ಅಲ್ಲ ಎಂದಿದ್ದಾರೆ. ಹೆಣ್ಣನ್ನು ದೇವರಿಗೆ ಹೋಲಿಸುತ್ತೇವೆ, ಪೂಜೆಯಿಂದ ಹೆಣ್ಣನ್ನು ಹೊರಗಿಡುವುದು ಎಂದರೆ ಸರಿನಾ? ದೇವರ ದರ್ಶನಕ್ಕೆ ಬಿಡದ ಭಕ್ತರು ಭಕ್ತರೆ ಅಲ್ಲ, ಮಹಿಳೆಗೆ ದೇವರ ದರ್ಶನ ಕೊಡದ ಅಯ್ಯಪ್ಪ ದೇವರೆಂದು ಅನಿಸುವುದಿಲ್ಲ, ಶಬರಿ ಮಲೆಯಲ್ಲಿ ಮಹಿಳೆಯರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಗಲ್ಫ್ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪ್ರಕಾಶ್ ರೈ ಹೇಳಿದ್ದಾರೆ.