ವಿಜಯಪುರ.ಮೇ.04: ಜೆಡಿಎಸ್​ ರಾಷ್ಟ್ರಾಧ್ಯಕ್ಷ ಎಚ್​.ಡಿ. ಕುಮಾರಸ್ವಾಮಿ ರವರು
"ಪ್ರಧಾನಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು.ಆದರೆ, ಒಂದು‌ ಪಕ್ಷದ ಬಗ್ಗೆ ಇವರ ಅಭಿಪ್ರಾಯ ತಿಳಿಸಲು ದೆಹಲಿಯಿಂದ ಇಲ್ಲಿಯವರೆಗೆ ಶ್ರಮಪಟ್ಟು ಬರಬೇಕಾ?" ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಬೇರೆ ರಾಜ್ಯಗಳಿಂದ ಉಗ್ರವಾದಿಗಳನ್ನು ಮತ ಕೇಳಲು ಕರೆಸುತ್ತಿದ್ದಾರೆ ಎಂದು ಬಿಜೆಪಿ ಮಾಡಿರುವ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ ಮತ್ತು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ ಕನ್ನಡಿಗರಾ? ಕರ್ನಾಟಕಕ್ಕೆ ಇವರ ಕೊಡುಗೆ ಏನು? ನಮ್ಮ ಪಕ್ಷಕ್ಕೆ ಮತ್ತು ನಮಗೆ ಉಪದೇಶ ಮಾಡಲು ಇವರು ಯಾರು? ಎಂದು ಪ್ರಶ್ನಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ರು ಕಾಂಗ್ರೆಸ್ ಮುಖಂಡರು ಜೆಡಿಎಸ್ ಗೆ ಮತ ಹಾಕಿಬೇಡಿ ಎನ್ನಲು ಇವರಿಬ್ಬರೇ ಚುನಾವಣೆ ನಿರ್ಧರಿಸಿದಂತಿದೆ. ಕರ್ನಾಟಕದ ಜನರ ಅಭಿಪ್ರಾಯಗಳನ್ನು‌ ಇವರೇ ಹೇಳುತ್ತಿರುವಂತಿದೆ. ನಾಲ್ಕು ವರ್ಷ ಅಧಿಕಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸದೆ ಯಾವ ನೈತಿಕತೆಯಿಂದ ಕರ್ನಾಟಕದ ಜನತೆಯ ಮತ‌ ಕೇಳಲು ಬಂದಿದ್ದಾರೆ? ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.