ಮುಂಬೈ (ಮಾರ್ಚ್27),ಭಾರತದ ಹಿರಿಯ ಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡರ್ ಫೇಸ್ ತಮ್ಮ ನಿವೃತಿಯಿ ನಿರ್ಧಾರವನ್ನು ಮುಂದೂಡಿದ್ದಾರೆ.ಈಗಾಗಲೇ  ತಮ್ಮ ನಿವೃತ್ತಿಯನ್ನು ಈ ಒಲಂಪಿಕ್ಸ್ ನಂತರ ನೀಡುವುದಾಗಿ ಪ್ರಕಟಿಸಿದ್ದರು.1996 ರ ಅಟ್ಲಾಂಟ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಟೆನ್ನಿಸ್ ಗೆ ಇನ್ನಷ್ಟು ಅಡಿಪಾಯ ಹಾಕಿದ್ದರು.

ಇವರು 2020 ರ ಟೋಕಿಯೋ ಒಲಂಪಿಕ್ಸ್ ನಂತರ ಟೆನ್ನಿಸ್ ಆಟಕ್ಕೆ ನಿವೃತ್ತಿ ನೀಡುವುದಾಗಿ ಘೋಷಿಸಿದ್ದರು.ಆದರೆ ಈ ಒಲಂಪಿಕ್ಸ್ ಕರೊನ ಕಾರಣದಿಂದ ಮುಂದೂಡಲ್ಪಟ್ಟಿದೆ.ಆದ್ದರಿಂದ ಇವರು ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದೂಡಿದ್ದಾರೆ. ಇವರು ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ನಲ್ಲಿ 18 ಗ್ರಾಂಡ್ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.