ತುಮಕೂರು( ಮಾರ್ಚ್ 27),ತುಮಕೂರಿನ ವ್ಯಕ್ತಿಯೊಬ್ಬ ಕರೊನ ಗೆ ಬಲಿಯಾಗಿದ್ದಾರೆ.ಶಿರಾ ಮೂಲದ 60 ವರ್ಷದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ.ಮೊನ್ನೆ 24 ನೆ ತಾರಿಕಿನಂದು ತುಮಕೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವ್ಯಕ್ತಿ  13 ಜನರ ಜೊತೆ ಪ್ರಯಾಣ ಮಾಡಿದ್ದು ಅವರನ್ನು ತಪಾಸಣೆ ನಡೆಸಲಾಗಿದೆ. ಇಂದು ಬೆಳಿಗ್ಗೆ 10,45 ಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ 3 ಜನ ಮೃತರಾಗಿದ್ದಾರೆ.

ಈ ಮೊದಲು ಕಲಬುರ್ಗಿ ಯಲ್ಲಿ ಒಬ್ಬರು,ಚಿಕ್ಕಬಳ್ಳಾಪುರ ದಲ್ಲಿ ಒಬ್ಬರು,ಈಗ ತುಮಕೂರು ಜಿಲ್ಲೆಯಲ್ಲಿ ಮೂರನೇ ಬಲಿಯಾಗಿದೆ.ಈಗ ರಾಜ್ಯದಲ್ಲಿ 55 ಜನ ಕರೊನ ಸೋಂಕಿತರೆಂದು ಗುರುತಿಸಲಾಗಿದೆ.

ಈ ವ್ಯಕ್ತಿ ತುಮಕುರಿನಿಂದ ದೆಹಲಿಗೆ ಹೋಗಿ ಅಲ್ಲಿ ಜಾಮಿಯಾ ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮಾರ್ಚ್ 11 ರಂದು ಪುನ ತುಮಕೂರಿಗೆ ಹಿಂತಿರುಗಿದ್ದರು .ಸಂಪರ್ಕ ಕ್ರಾಂತಿ ರೈಲಿನ ಮೂಲಕ ಮಾರ್ಚ್ 5 ರಂದು ಪ್ರಯಾಣಿಸಿದ್ದರು.ಮಾರ್ಚ್ 7 ಕ್ಕೆ ದೆಹಲಿ ತಲುಪಿದ್ದರು.