ಕೆಎಂಎಫ್‍ಗೂ ರೇವಣ್ಣ ಅವರಿಗೂ ಅವಿನಾಭಾವ ನಂಟು. ಸಮ್ಮಿಶ್ರ ಸರ್ಕಾರ ಪತನಗೊಳ್ಳುತ್ತಿದ್ದಂತೆಯೇ ಕೆಎಂಎಫ್ ಅಧ್ಯಕ್ಷಗಿರಿಯ ಮೇಲೆ ರೇವಣ್ಣ ಅವರು ನಿಗಾ ವಹಿಸಿದ್ದರು. ಕಾಂಗ್ರೆಸ್ ಬೆಂಬಲಿತ ನಾಲ್ವರನ್ನು ಹೈದರಾಬಾದ್‍ಗೆ ಕರೆದುಕೊಂಡು ಹೋಗಿದ್ದೂ ದೊಡ್ಡ ಸುದ್ದಿಯಾಗಿತ್ತು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕೆಎಂಎಫ್ ಅಧ್ಯಕ್ಷಗಿರಿ ರೇವಣ್ಣ ಅವರ ಕೈ ತಪ್ಪಿ ಅದು ಬಾಲಚಂದ್ರ ಜಾರಕಿಹೊಳಿಯವರ ಪಾಲಾಗಿದೆ. ಇಂದು ಬೆಂಗಳೂರಿನಲ್ಲಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ನಿರೀಕ್ಷೆಯಂತೆಯೇ ರೇವಣ್ಣ ಮತ್ತು ಬಾಲಚಂದ್ರ ಜಾರಕಿಹೊಳಿ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ಅಗತ್ಯ ಬೆಂಬಲ ಇಲ್ಲದೇ ಇದ್ದುದರಿಂದ ರೇವಣ್ಣ ನಾಮಪತ್ರ ಹಿಂಪಡೆದರು. ಆ ಮೂಲಕ ಬಾಲಚಂದ್ರ ಜಾರಿಕಿಹೊಳಿ ಅವಿರೋಧವಾಗಿ ಆಯ್ಕೆಯಾದರು. ಬಾಲಚಂದ್ರ ಜಾರಕಿಹೊಳಿ ಅಭಿಮಾನಿಗಳು ಕೇಂದ್ರ ಕಚೇರಿಯ ಮುಂದೆ ಸಂಭ್ರಮಿಸಿದರು.