n6 (1)

ನವದೆಹಲಿ ಫೆ.೧೬:
ಕಾವೇರಿ ನದಿಯ ನೀರು ಹಂಚಿಕೆ ವಿವಾದದಲ್ಲಿ ಸುಪ್ರೀಂ ಕೋರ್ಟ್ ನಿಂದ ಕರ್ನಾಟಕಕ್ಕೆ ಸಂತಸ ಸುದ್ದಿ ಸಿಕ್ಕಿದ್ದು, ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿದೆ.

2007ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಪ್ರಶ್ನಿಸಿದ ಕರ್ನಾಟಕ ರಾಜ್ಯ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ತೀರ್ಪನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮಿತಾವ್ ರಾಯ್, ನ್ಯಾ. ಎಎಂ ಖಾನ್ವೀಲ್ಕರ್ ಮತ್ತು ದೀಪಕ್ ಮಿಶ್ರಾ ಅವರನ್ನು ಒಳಗೊಂಡಿರುವ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿದೆ.

ನ್ಯಾಯಾಧಿಕರಣ ಅನುಸರಿಸಿರುವ ಕ್ರಮ ಸರಿಯಾಗಿಯೇ ಇದ್ದು ನದಿಗಳು ರಾಷ್ಟ್ರದ ಸಂಪತ್ತು. ಇದು ರಾಜ್ಯಗಳ ಸ್ವತ್ತಲ್ಲ ನದಿಗಳ ಮೇಲೆ ಪ್ರಭುತ್ವ ಸಾಧಿಸುವ ಅಧಿಕಾರ ಯಾರಿಗೂ ಇರಲ್ಲ. ಎರಡೂ ರಾಜ್ಯಗಳು ಸಮಾನ ಧರ್ಮವನ್ನು ಪಾಲನೆ ಮಾಡಬೇಕು. ಬ್ರಿಟಿಷ್ ಕಾಲದ ಒಪ್ಪಂದಗಳ ಬಗ್ಗೆ ನ್ಯಾಯಮೂರ್ತಿಗಳ ಉಲ್ಲೇಖ-
ಸಂವಿಧಾನದಡಿ ಕರ್ನಾಟಕ ರಾಜ್ಯಕ್ಕೆ ಚೌಕಾಸಿ ಮಾಡುವ ಅಧಿಕಾರವಿದೆ. ಪುದುಚೇರಿ, ಕೇರಳಕ್ಕೆ ನೀಡಿರುವ ನೀರು ಹಂಚಿಕೆ ಸರಿಯಾಗಿದೆ. ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಸರಿಯಿದೆ. ನೀರು ಹಂಚುವಾಗ ತಮಿಳುನಾಡಿನ 20 ಟಿಎಂಸಿ ಅಂತರ್ಜಲ ಪರಿಗಣಿಸಬೇಕು ಎಂದು ನ್ಯಾಯಲಯದ ತೀರ್ಪುನಲ್ಲಿ ತಿಳಿಸಲಾಗಿದೆ.